ಭಾರತಕ್ಕೆ ಬೆದರಿಕೆ ಹಾಕಿದ PPP ನಾಯಕಿ
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ನೀಡಿದ ವಿವಾದಿತ ಹೇಳಿಕೆಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಪಾಕ್‌ನ ಮತ್ತೊಬ್ಬ ಸಚಿವರು, ಭಾರತಕ್ಕೆ ಪರಮಾಣು ಬಾಂಬ್ ದಾಳಿಯ ಬೆದರಿಕೆ ಹಾಕಿದ್ದಾರೆ. ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕಿ ಶಾಜಿಯಾ ಮಾರಿ, ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ ಎಂಬುದನ್ನು ಭಾರತ ಮರೆಯಬಾರದು. ನಮ್ಮ ಪರಮಾಣು ಸ್ಥಿತಿಯು ಮೌನವಾಗಿರಲು ಅಲ್ಲ. ಅಗತ್ಯ ಬಿದ್ದರೆ ನಾವು ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಶಾಜಿಯಾ ಭಾರತಕ್ಕೆ ಬೆದರಿಕೆ ಹಾಕಿದ್ದು, ಮೋದಿ ಸರ್ಕಾರ ಹೋರಾಡಿದರೆ ಉತ್ತರ ಸಿಗುತ್ತದೆ ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಪರಮಾಣು ರಾಷ್ಟ್ರದ ಸ್ಥಾನಮಾನ ನೀಡಿ ಸುಮ್ಮನಿರಲು ಆಗಿಲ್ಲ. ಪಾಕಿಸ್ತಾನಕ್ಕೂ ಹೇಗೆ ಉತ್ತರಿಸಬೇಕು ಎಂಬುದು ಗೊತ್ತಿದೆ ಎಂದು ಹೇಳಿದ್ದಾರೆ.