ಪ್ರಜ್ವಲ್ ರೇವಣ್ಣ ಮಾಡಿದ್ದ ಈ ಒಂದು ದರ್ಪದ ವರ್ತನೆಯೇ ಅವರು ಸಿಕ್ಕಿಹಾಕುವಂತೆ ಮಾಡಿತು

Krishnaveni K

ಶನಿವಾರ, 2 ಆಗಸ್ಟ್ 2025 (16:33 IST)
ಬೆಂಗಳೂರು: ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಘೋಷಣೆಯಾಗಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ತೋರಿದ ಈ ಒಂದು ದರ್ಪದ ವರ್ತನೆಯೇ ಸಿಕ್ಕಿಹಾಕುವಂತೆ ಮಾಡಿತು.

ಪ್ರಜ್ವಲ್ ರೇವಣ್ಣ ತಮ್ಮ ಮನೆಗೆಲಸಕ್ಕೆ ಬರುತ್ತಿದ್ದ 55 ವರ್ಷದ ಮಹಿಳೆ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದರು. ಒಮ್ಮೆ ತೋಟದ ಮನೆಯಲ್ಲಿ ನಂತರ ಬಸವನಗುಡಿಯ ಮನೆಯಲ್ಲಿ ಅತ್ಯಾಚಾರ ನಡೆಸಿದ್ದರು. ಅಷ್ಟೇ ಅಲ್ಲದೆ ಆ ವಿಡಿಯೋಗಳನ್ನೂ ಚಿತ್ರೀಕರಿಸಿಕೊಂಡಿದ್ದರು. ಇದುವೇ ಪ್ರಕರಣದಲ್ಲಿ ದೊಡ್ಡ ಸಾಕ್ಷಿಯಾಯಿತು.

ನಾನು ನಿನ್ನ ತಾಯಿ ವಯಸ್ಸಿನವಳು ಬಿಡು ಎಂದರೂ ಬಿಡದೇ ಪ್ರಜ್ವಲ್ ರೇಪ್ ಮಾಡಿದ್ದ ಎನ್ನಲಾಗಿದೆ. ಬಸವನಗುಡಿ ಮನೆಯಲ್ಲಿ ರೇಪ್ ವೇಳೆ ಸಂತ್ರಸ್ತೆ ಧರಿಸಿದ್ದ ಸೀರೆ, ರವಿಕೆ, ಸೇರಿದಂತೆ ಉಡುಪುಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಳು. ಇದಾಗಿ ಕೆಲವು ಸಮಯದ ನಂತರ ಸಂತ್ರಸ್ತೆ ಬಂದು ಬಟ್ಟೆ ಕೊಡುವಂತೆ ಕೇಳಿಕೊಂಡರೂ ದರ್ಪ ತೋರಿದ್ದ ಪ್ರಜ್ವಲ್ ಆಕೆಯ ವಸ್ತುಗಳನ್ನು ತೆಗೆದುಕೊಂಡು ಹೋಗಲೂ ಬಿಟ್ಟಿರಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ