ಕೋರ್ಟ್ ನಲ್ಲಿ ಕಣ್ಣೀರಿಡುತ್ತಾ ಪ್ರಜ್ವಲ್ ರೇವಣ್ಣ ಹೇಳಿದ್ದೇನು, ಸಂಪೂರ್ಣ ವಿವರ ಇಲ್ಲಿದೆ
ಕೋರ್ಟ್ ನಲ್ಲಿ ಇಂದು ಬಿಕ್ಕಿ ಬಿಕ್ಕಿ ಅತ್ತ ಪ್ರಜ್ವಲ್ ರೇವಣ್ಣ ನಾನೇನು ತಪ್ಪು ಮಾಡಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೇ ಷಡ್ಯಂತ್ರ ಮಾಡಿದ್ದಾರೆ. ಮಹಿಳೆಯ ಸಹೋದರಿ ಕೂಡಾ ನಮ್ಮಲ್ಲೇ ಕೆಲಸ ಮಾಡುತ್ತಿದ್ದಳು. ಆದರೆ ಆಕೆಯಲ್ಲೂ ಮಹಿಳೆ ಯಾಕೆ ಈ ಬಗ್ಗೆ ಹೇಳಿಲ್ಲ?
ನಾನು ಸಂಸದನಾಗಿದ್ದಾಗ ಯಾರೂ ಯಾಕೆ ದೂರು ಕೊಟ್ಟಿಲ್ಲ. ಚುನಾವಣೆ ಸಂದರ್ಭದಲ್ಲೇ ವಿಡಿಯೋ ಹರಿಯಬಿಟ್ಟಿದ್ದರ ಹಿಂದೆ ರಾಜಕೀಯ ಷಡ್ಯಂತ್ರವಿದೆ. ನಾನು ಮೆರಿಟ್ ಸ್ಟೂಡೆಂಟ್. ಇಂಜಿನಿಯರಿಂಗ್ ಪದವೀಧರ ಎಂದಿದ್ದಾರೆ.
ಇನ್ನು ಕೋರ್ಟ್ ಹಾಲ್ ನಲ್ಲಿ ನನ್ನ ತಂದೆ-ತಾಯಿಯನ್ನು ಕಳೆದ 6 ತಿಂಗಳಿನಿಂದ ನಾನು ನೋಡಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.