ಕೆಲವು ದಿನಗಳ ಹಿಂದಷ್ಟೇ ಪ್ರಜ್ವಲ್ ಕೇಸ್ ನಲ್ಲಿ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಈ ವೇಳೆ ಪ್ರಜ್ವಲ್ ಮನೆಕೆಲಸದಾಕೆ ಮೇಲೆ ಬಸವನಗುಡಿ ಮನೆಯಲ್ಲಿ ರೇಪ್ ಮಾಡಿದ್ದರು ಅಲ್ಲದೆ, ಆಕೆಯ ಮಗಳಿಗೂ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂಬ ಅಂಶ ಉಲ್ಲೇಖವಾಗಿತ್ತು.
ಸದ್ಯಕ್ಕೆ ಪ್ರಜ್ವಲ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಪ್ರಜ್ವಲ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ತಿರಸ್ಕರಿಸಿದೆ. ಮಹಿಳೆಯ ಮೇಲೆ ರೇಪ್ ಆರೋಪದಲ್ಲಿ ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಜಾಮೀನಿಗೆ ಪ್ರಯತ್ನಿಸಿದ್ದರು.
ಪ್ರಜ್ವಲ್ ಮೇಲೆ ಕೇವಲ ಒಂದಲ್ಲ, ಹಲವು ಪ್ರಕರಣಗಳಿವೆ. ಹೀಗಾಗಿ ಅವರಿಗೆ ಎಲ್ಲಾ ಪ್ರಕರಣಗಳಿಂದ ಮುಕ್ತಿ ಸಿಕ್ಕು ಜಾಮೀನು ಪಡೆಯುವುದು ಅಷ್ಟು ಸುಲಭವಲ್ಲ. ನಿನ್ನೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ವಜಾಗೊಂಡಿದೆ. ಇನ್ನು, ಪ್ರಜ್ವಲ್ ಮುಂದಿನ ನಡೆಯೇನು ಎಂಬುದು ಇನ್ನೂ ತಿಳುದುಬರಬೇಕಿದೆ.