ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಮಹತ್ವದ ತೀರ್ಪು ಕೊಟ್ಟ ಕೋರ್ಟ್

Krishnaveni K

ಶುಕ್ರವಾರ, 1 ಆಗಸ್ಟ್ 2025 (14:25 IST)
ಬೆಂಗಳೂರು: ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ.

ಮೈಸೂರಿನ ಕೆಆರ್ ನಗರದ ಮಹಿಳೆ ಮೇಲೆ ಅತ್ಯಾಚಾರ, ಅಪಹರಣವೆಸಗಿದ ಪ್ರಕರಣದಲ್ಲಿ ವಿಚಾರಣೆ ಪೂರ್ತಿಗೊಳಿಸಿದ ಜನಪ್ರತಿನಿಧಿಗಳ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ನ್ಯಾ. ಸಂತೋಷ್ ಗಜಾನನ ಭಟ್ ಪ್ರಜ್ವಲ್ ದೋಷಿ ಎಂದು ತೀರ್ಪು ಪ್ರಕಟಿಸಿದ್ದಾರೆ.

ಆದರೆ ಪ್ರಜ್ವಲ್ ರೇವಣ್ಣಗೆ ಎಷ್ಟು ವರ್ಷ ಶಿಕ್ಷೆ ಎಂಬುದನ್ನು ಇನ್ನೂ ಪ್ರಕಟಿಸಿಲ್ಲ. ತೀರ್ಪು ಸಂಬಂಧ ಪ್ರಜ್ವಲ್ ರನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಪ್ರಜ್ವಲ್ ಮುಂದೆ ತೀರ್ಪು ಘೋಷಿಸಿದರು.

ಈ ಪ್ರಕರಣದಲ್ಲಿ ಪ್ರಜ್ವಲ್ ಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆಯಾದರೂ ಅಚ್ಚರಿಯಿಲ್ಲ. ಎಲ್ಲಾ ಸರಿ ಹೋಗಿದ್ದರೆ ಜುಲೈ 30 ರಂದೇ ಶಿಕ್ಷೆ ಪ್ರಕಟವಾಗಬೇಕಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಮುಂದೂಡಿಕೆಯಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ