ಸೆಂಟ್ರಲ್ ನಿಂದ ಪ್ರಕಾಶ್ ರೈ ಸ್ಪರ್ಧೆ; ಸಂಸದ ಹಿಂದೇಟು ಹಾಕಿದ್ದು ಏಕೆ?
ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಪ್ರಕಾಶ್ ರೈ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ನಡುವೆ ಬೆಂಗಳೂರು ಕೇಂದ್ರದ ಹಾಲಿ ಬಿಜೆಪಿ ಸಂಸದ ಪಿ.ಸಿ.ಮೋಹನ್ ಹೇಳಿಕೆ ಈ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಯಾರು ಬೇಕಾದ್ರು ಸ್ಪರ್ಧೆ ಮಾಡಬಹುದು. ಅದೇ ರೀತಿ ನೀವು ಹೇಳಿದ ವ್ಯಕ್ತಿಯು ಸ್ಪರ್ಧೆ ಮಾಡಬಹುದು ಎಂದು ಪ್ರಕಾಶ್ ರೈ ಹೆಸರು ಉಲ್ಲೇಖಿಸದೆ ಪ್ರತಿಕ್ರಿಯಿಸಿದ್ದಾರೆ ಪಿಸಿ ಮೋಹನ್.
ನಾನು 5 ವರ್ಷ ಸಂಸದನಾಗಿ ಮಾಡಿದ ಕಾರ್ಯಗಳು ಹಾಗೂ ಪ್ರಧಾನಿ ಮೋದಿ ಸಾಧನೆಗಳ ಮೂಲಕ ಪ್ರಚಾರ ನಡೆಸುತ್ತೇನೆ ಎಂದರು.
ಪ್ರಕಾಶ್ ರೈ ಹೆಸರು ಹೇಳಲು ಇಚ್ಛಿಸದ ಪಿಸಿ ಮೋಹನ್, ಪ್ರಕಾಶ್ ರೈ ಸ್ಪರ್ಧೆ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.