ಪೊಲೀಸ್ ವಿಚಾರಣೆಗೆ ಹಾಜರಾದ ಪ್ರಣವ್ ದೇವರಾಜ್ ಹೇಳಿದ್ದಿಷ್ಟು..

ಸೋಮವಾರ, 2 ಅಕ್ಟೋಬರ್ 2017 (14:51 IST)
ಗೀತಾ ವಿಷ್ಣು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಣವ್ ದೇವರಾಜ್ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ಬಳಿಕ ಮಾತನಾಡಿದ ಅವರು, ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದ ಹಿನ್ನೆಲೆ ವಿಚಾರಣೆಗೆ ಕರೆಸಿದ್ದರು ಎಂದು ಹೇಳಿದ್ದಾರೆ.

ಜಯನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ಪ್ರಣವ್ ದೇವರಾಜ್, ಅಪಘಾತಕ್ಕೂ ಮುನ್ನ ಗೀತಾ ವಿಷ್ಣು ಜೊತೆ ಊಟ ಮಾಡಿದ್ದೆವು. ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳಕ್ಕೆ ಹೋಗಿದ್ದರಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. 1 ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದಾರೆ.  ಗೀತಾ ವಿಷ್ಣು ನನ್ನ ಸ್ನೇಹಿತ ಎಂಬುದು ನಿಜ ಎಂದು ಪ್ರಣವ್ ದೇವರಾಜ್ ಹೇಳಿದ್ದಾರೆ.

ಸೆ.29ರಂದು ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದ ಗೀತಾವಿಷ್ಣು ಅಪಘಾತ ಎಸಗಿದ್ದ. ಈ ಸಂದರ್ಭ ಗೀತಾ ವಿಷ್ಣು ಜೊತೆ ಕೆಲ ಸ್ಯಾಂಡಲ್ ವುಡ್ ನಟರ ಹೆಸರೂ ಕೇಳಿಬಂದಿತ್ತು. ಸ್ಥಳೀಯ ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧರಿಸಿದ ಪೊಲೀಸರು ಹಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ