ಮೈಸೂರಂದ್ರೆ ಮಹಾರಾಜರು ನೆನಪಾಗ್ತಿದ್ದರು, ಈಗ ಟಿಪ್ಪು ಸಂತತಿ ತುಂಬಿದೆ: ಪ್ರತಾಪ್ ಸಿಂಹ
ಬುಧವಾರ, 8 ನವೆಂಬರ್ 2017 (10:00 IST)
ದಾವಣಗೆರೆ: ಕರಾವಳಿ ಎಂದರೆ ರಾಣಿ ಅಬ್ಬಕ್ಕ ನೆನಪಾಗುತ್ತಿದ್ದರು, ಈಗ ಯಾಸಿನ್, ರಿಯಾಜ್ ಭಟ್ಕಳ್ ನೆನಪಾಗ್ತಾರೆ. ಮೈಸೂರು ಎಂದರೆ ಮಹಾರಾಜರು ನೆನಪಾಗ್ತಿದ್ದರು. ಆದ್ರೀಗ ಟಿಪ್ಪು ಸಂತತಿಯವರು ತುಂಬಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರದಿಂದ ಪೊಲೀಸ್ ಇಲಾಖೆಯನ್ನ ದುರ್ಬಳಕೆ ಮಾಡಿಕೊಂಡಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಪೊಲೀಸ್ ಅಧಿಕಾರಿಗಳು ಸಾವಿಗೆ ಶರಣಾಗಿದ್ದಾರೆ. ಪೋಲೀಸ್ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದೆ ಎಂದರು.
ಕರಾವಳಿ ಎಂದರೆ ಮೊದಲು ರಾಣಿ ಅಬ್ಬಕ್ಕ ನೆನಪಾಗುತ್ತಿದ್ದರು. ಈಗ ಯಾಸಿನ್, ರಿಯಾಜ್ ಭಟ್ಕಳ್ ನೆನಪಾಗ್ತಾರೆ. ಮೈಸೂರು ಎಂದರೆ ಮಹಾರಾಜರು ನೆನಪಾಗ್ತಿದ್ದರು. ಆದರೆ ಈಗ ಟಿಪ್ಪು ಸಂತತಿಯವರು ತುಂಬಿದ್ದಾರೆ. ಸರ್ಕಾರ ಟಿಪ್ಪು ಜಯಂತಿ ಆಚರಿಸುವ ಮೂಲಕ ಲಾಡೆನ್ ಹಾಗೂ ಉಲ್ ಉಮರ್ ಸಂತತಿ ಹೆಚ್ಚು ಮಾಡಲು ಹೊರಟಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಒಬ್ಬ ಸಭ್ಯ ರಾಜಕಾರಣಿ ಎಂದು ಹೊಗಳಿದ ಸಿಂಹ, ದಲಿತರನ್ನು ಸಿಎಂ ಮಾಡಲು ಕಾಂಗ್ರೆಸ್ ನಿಂದ ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ರಾಜಕೀಯ ಕುತಂತ್ರಕ್ಕೆ ದಲಿತರು ತತ್ತರಿಸಿದ್ದಾರೆ. ಹೀಗಾಗಿ ಪರಮೇಶ್ವರ್ ಬೇಸರದ ಹೇಳಿಕೆ ನಿಡುತ್ತಿದ್ದಾರೆ ಎಂದು ಹೇಳಿದ್ದಾರೆ.