ಹನುಮ ಜಯಂತಿ ಪ್ರಯುಕ್ತ ಮಾಲೆ ಧರಿಸಿದ್ದ ಪ್ರತಾಪಸಿಂಹ ಅವರು ಹುಣಸೂರಿನ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಿಸರ್ಜನೆ ಮಾಡಿದ್ದಾರೆ. ಪ್ರತಾಪಸಿಂಹ ಜೊತೆಗೆ ಅನೇಕರು ಕೂಡ ವಿಶೇಷ ಪೂಜೆ ಸಲ್ಲಿಸಿ ಮಾಲೆ ವಿಸರ್ಜಿಸಿದ್ದಾರೆ.
ಹನುಮ ಜಯಂತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಾಟೆಯಿಂದ ಪ್ರತಾಪಸಿಂಹ ಅವರ ಬಂಧನವಾಗಿತ್ತು. ಆದ್ದರಿಂದ ತಡವಾಗಿ ಹನುಮ ಮಾಲೆ ವಿಸರ್ಜನೆ ಮಾಡಿದ್ದಾರೆ.
ನಂತರ ಮಾತನಾಡಿದ ಅವರು, ನಂಬಿಕೆ ಮೇಲೆ ಪ್ರಹಾರ ಮಾಡುವ ಕೆಲಸ ಮಾಡಲಾಗಿದೆ. ಯಾರಿಗೆ ಯಾವ ಸಮಯಕ್ಕೆ ಪಾಪದ ಪ್ರತಿಫಲ ಸಿಗಬೇಕೋ ಅವಾಗ ಸಿಗಲಿದೆ. ಹನುಮ ಜಯಂತಿ ಮೆರವಣಿಗೆ ನಡೆಯುವ ವಿಶ್ವಾಸದಿಂದಲೇ ಇರುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಯಾವ ಸಂದರ್ಭದಲ್ಲಿ ಯಾವ ಉತ್ತರ ಕೊಡಬೇಕಾಗುತ್ತೆ ಅದಕ್ಕೆ ಕಾಲ ಪರಿಪಕ್ವವಾಗಬೇಕು. ಆಗ ಅವರಿಗೆ ಉತ್ತರ ಸಿಗುತ್ತದೆ. ಹುಣಸೂರಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಂಯಮದಿಂದ ಇರಬೇಕು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.