ಹೊಸ ತೊಡಕು ಆಚರಣೆಗೆ ಸಿದ್ಧತೆ

ಗುರುವಾರ, 23 ಮಾರ್ಚ್ 2023 (13:22 IST)
ಹಿಂದೂಗಳ ಹೊಸ ವರ್ಷ ಯುಗಾದಿಯನ್ನು ಬೆಂಗಳೂರು ಸಿಟಿ ಮಂದಿ ಸಂಭ್ರಮ-ಸಡಗರ, ಪೂಜೆ-ಪುನಸ್ಕಾರದೊಂದಿಗೆ ಬರಮಾಡಿಕೊಂಡಿದ್ದಾರೆ. ಯುಗಾದಿಯ ಮಾರನೇ ದಿನ ಅಂದ್ರೆ ಇಂದು ಎಲ್ಲೆಡೆ ಹೊಸತೊಡಕಿಗಾಗಿ ಸಿದ್ಧತೆ ನಡೆದಿದೆ. ಮಟನ್, ಚಿಕನ್ ಅಂಗಡಿಗಳ ಮುಂದೆ ಸರತಿ ಸಾಲು ಕಂಡು ಬರುತ್ತಿದೆ. ಬೆಳಗ್ಗೆ 6 ಗಂಟೆಯಿಂದಲೇ ಜನ ಮಾಂಸದಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಹಳ್ಳಿಗಳಲ್ಲಿ ಗುಡ್ಡೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ದೇವನಹಳ್ಳಿ ತಾಲೂಕಿನ ಹಲವೆಡೆ ರಾತ್ರಿಯಿಡಿ ಕುರಿಗಳ ಕಟಾವು ಮಾಡಲಾಗಿದೆ. ಯಲಿಯೂರು ಬಳಿ ರಾತ್ರಿಯಿಡಿ ಸಾವಿರಾರು ಕೆಜಿ ಕುರಿ ಮಾಂಸ ಕಟಾವು ಮಾಡಿ ಸಿದ್ಧತೆ ಮಾಡಿಕೊಂಡಿದ್ದು, ಹೊಸತೊಡಕು ಮಾಡಲು ಮಾಂಸದಂಗಡಿಗಳಿಗೆ ಜನ ಮುಗಿಬಿದ್ದಿದ್ದಾರೆ. ಕುರಿ‌ಮಾಂಸ ಕಳೆದ ವರ್ಷಕ್ಕಿಂತ ಈ ಬಾರಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಒಂದು ಕೆಜಿಗೆ 700 ರೂ ದರ ನಿಗದಿ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ