ಆನ್​​ಲೈನ್​​ನಲ್ಲಿ ಪ್ರಧಾನಿ ಮೋದಿ ಪ್ರಚಾರ

ಗುರುವಾರ, 20 ಏಪ್ರಿಲ್ 2023 (18:50 IST)
ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಸ್ಟಾರ್​ ಪ್ರಚಾರಕರಿಂದ ಪ್ರಚಾರ ನಡೆಸಲಾಗ್ತಿದೆ.. ರಾಜ್ಯ ರಣಕಣಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಡಲಿದ್ದು, ಪ್ರಚಾರ ನಡೆಸಲಿದ್ದಾರೆ.. ಆದರೆ ಈ ಬಾರಿ ಆನ್​​​ಲೈನ್​ ಮೂಲಕ ಪ್ರಚಾರ ನಡೆಸಲಿದ್ದಾರೆ.. ಏಪ್ರಿಲ್ 27 ರಂದು ಮೋದಿ ಆನ್​ಲೈನ್ ಮೂಲಕ ಭಾಷಣ ನಡೆಸಲಿದ್ದಾರೆ.. 50 ಲಕ್ಷ ಜನರನ್ನು ಸೇರಿಸಲು ರಾಜ್ಯ ಬಿಜೆಪಿ ತೀರ್ಮಾನ ಮಾಡಿಕೊಂಡಿದ್ದು, ಮಹಾ ಶಕ್ತಿಕೇಂದ್ರದಲ್ಲಿ LED ಸ್ಕ್ರೀನ್ ಅಳವಡಿಕೆಗೆ ನಿರ್ಧರಿಸಲಾಗಿದೆ. ರಾಜ್ಯದ ಎಲ್ಲಾ 58 ಸಾವಿರ ಬೂತ್​ಗಳನ್ನು ಒಳಗೊಂಡ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಭಾಷಣ ವೀಕ್ಷಿಸಲಿದ್ದಾರೆ. ಮರುದಿನ ಅಂದರೆ ಏಪ್ರಿಲ್​ 28 ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಹಳೆ ಮೈಸೂರು ಭಾಗದಲ್ಲಿ ಮೊದಲ ರ್ಯಾಲಿ ನಡೆಸಲಿದ್ದಾರೆ.. ಸರಿ ಸುಮಾರು 20 ಕಡೆ ರ್ಯಾಲಿ ನಡೆಸಲಿದ್ದಾರೆ.. 5 ರೋಡ್ ಶೋ ನಡೆಸಲು ನಿರ್ಧಾರ ಮಾಡಲಾಗಿದ್ದು, ಕಲಬುರಗಿ, ಬೆಂಗಳೂರು, ಹುಬ್ಬಳ್ಳಿ ಸೇರಿ ಒಟ್ಟು ಐದು ಕಡೆ ರೋಡ್ ಶೋ ನಡೆಸಲಿದ್ದಾರೆ. ಅಂತಿಮ ಹಂತದಲ್ಲಿ ಅಗತ್ಯ ಎನಿಸಿದರೆ ಒಂದೆರಡು ಕಾರ್ಯಕ್ರಮ ಹೆಚ್ಚು ಆಯೋಜಿಸಲು ತೀರ್ಮಾನ ಮಾಡಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ