ತನ್ನ ಸ್ಥಿತಿ ನೆನೆದು ಜೈಲಿನಲ್ಲಿ ಖೈದಿ ಪ್ರಜ್ವಲ್ ರೇವಣ್ಣ ಕಣ್ಣೀರು, ಕೈದಿ ನಂಬರ್‌ ನೀಡಿದ್ಮೇಲೆ ಫುಲ್ ಸೈಲೆಂಟ್‌

Sampriya

ಭಾನುವಾರ, 3 ಆಗಸ್ಟ್ 2025 (14:09 IST)
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಒಂದು ದಿನದ ನಂತರ ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಇಂದು ಬೆಳಿಗ್ಗೆ ಖೈದಿ ನಂಬರ್ ನೀಡಲಾಯಿತು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಖೈದಿ ಸಂಖ್ಯೆ 15528 ಅನ್ನು ಭಾನುವಾರ ಬೆಳಿಗ್ಗೆ ಅವರಿಗೆ ಅಧಿಕೃತವಾಗಿ ನೀಡಲಾಯಿತು ಎಂದು ಅವರು ಹೇಳಿದರು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ ಬಳಿಕ ಅವರಿಗೆಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿ ಸಂಖ್ಯೆ ನೀಡಲಾಗಿದೆ. 

ನ್ಯಾಯಾಲಯದ ತೀರ್ಪಿನ ಬಳಿಕ ಜೈಲಿನಲ್ಲಿ ಮೊದಲ ರಾತ್ರಿ ಕಳೆದ ಪ್ರಜ್ವಲ್ ರೇವಣ್ಣ ಅವರ ಆರೋಗ್ಯವನ್ನು ತಪಾಸಣೆ ಮಾಡಿದ್ದು, ಆರೋಗ್ಯದಲ್ಲಿ ಸ್ಥಿರತೆಯಿದೆ ಎಂದು ಹೇಳಲಾಯಿತು. ಇನ್ನೂ ತೀರ್ಪಿನಿಂದ ಕುಗ್ಗಿರುವ ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕುತ್ತಿದ್ದಾರೆ. 


"ವೈದ್ಯಕೀಯ ತಪಾಸಣೆಯ ಸಮಯದಲ್ಲಿ ತನ್ನ ಸ್ಥಿತಿಯನ್ನು ನೆನೆದು ಸಿಬ್ಬಂದಿ ಬಳಿ ಕಣ್ಣೀರು ಹಾಕಿದ್ದಾರೆ ಎಂದು ಗೊತ್ತಾಗಿದೆ. ಅದಲ್ಲದೆ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್‌ನ ಮೊರೆ ಹೋಗಿರುವುದಾಗಿ ಪ್ರಜ್ವಲ್ ಹೇಳಿಕೊಂಡಿದ್ದಾರೆ. 

ಮಾಜಿ ಸಂಸದರನ್ನು ಪ್ರಸ್ತುತ ಹೈ-ಸೆಕ್ಯುರಿಟಿ ಸೆಲ್‌ನಲ್ಲಿ ಇರಿಸಲಾಗಿದ್ದು, ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತಿದೆ.

ಜೈಲು ಅಧಿಕಾರಿಗಳ ಪ್ರಕಾರ, ಅಪರಾಧಿಗಳಿಗೆ ಗುಣಮಟ್ಟದ ಡ್ರೆಸ್ ಕೋಡ್ ಅನ್ನು ಅನುಸರಿಸಲಾಗುತ್ತಿದೆ ಮತ್ತು ಅವರು ಕೈದಿಗಳಿಗೆ ನೀಡುವ ಸಮವಸ್ತ್ರವನ್ನು ಧರಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ