ಡಿಐಜಿ ರೂಪಾ ವರ್ಗಾವಣೆ: ಸರ್ಕಾರದ ನಿರ್ಧಾರ ಖಂಡಿಸಿ ಜೈಲಿನಲ್ಲಿ ಖೈದಿಗಳ ಪ್ರತಿಭಟನೆ

ಮಂಗಳವಾರ, 18 ಜುಲೈ 2017 (10:33 IST)
ಬೆಂಗಳೂರು: ಡಿಐಜಿ ರೂಪಾ ಅವರ ವರ್ಗಾವಣೆಯನ್ನು ಖಂಡಿಸಿ ಹಾಗೂ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆದುಕೊಳ್ಳಬೇಕೆಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ 200 ಕ್ಕೂ ಹೆಚ್ಚು ಕೈದಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
 
ರೂಪಾ ಅವರ ಪರವಾಗಿದ್ದ 200 ಕ್ಕೂ ಹೆಚ್ಚು ಕೈದಿಗಳು ಇಂದು ಬೆಳಗ್ಗಿನ ಉಪಹಾರ ಸ್ವೀಕರಸಿದೆ ಪ್ರತಿಭಟಿಸುತ್ತಿದ್ದಾರೆ. ಅಲ್ಲದೇ ಜೈಲಿನ ಅಧಿಕ್ಷಕಿ ಅನಿತಾ ಆರ್‌ ಅವರನ್ನು ಹುದ್ದೆಯಲ್ಲಿ ಮುಂದುವರಿಸಬಾರದು, ಅವರು ಶಶಿಕಲಾಗೆ ನೆರವು ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.
 
ಸರ್ಕಾರ ರೂಪಾ ಮತ್ತು ಸತ್ಯನಾರಾಯಣ ರಾವ್‌ ಅವರನ್ನು ಬಂದೀಖಾನೆ ಇಲಾಖೆಯ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಿದೆ. ಕಾರಾಗೃಹದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ್‌ ಅವರನ್ನು ಸಹ ಎತ್ತಂಗಡಿ ಮಾಡಲಾಗಿದ್ದು, ಯಾವುದೇ ಹುದ್ದೆ ಸೂಚಿಸಲಾಗಿಲ್ಲ. 
 

ವೆಬ್ದುನಿಯಾವನ್ನು ಓದಿ