ವಿವಾದಕ್ಕೀಡಾದ ಬೆಂಗಳೂರಿನ ಶಾಲೆಯ ಚೀನಾ ವರ್ಷಾಚರಣೆ

ಗುರುವಾರ, 10 ಆಗಸ್ಟ್ 2017 (10:17 IST)
ಬೆಂಗಳೂರು: ಒಂದೆಡೆ ಗಡಿಯಲ್ಲಿ ಚೀನಾ ಕಾಲ್ಕೆರೆದು ಜಗಳ ತೆಗೆಯುತ್ತಿದ್ದರೆ, ರಾಜ್ಯ ರಾಜಧಾನಿಯ ಶಾಲೆಯೊಂದರಲ್ಲಿ ಚೀನಾ ಹೊಸ ವರ್ಷಾಚರಣೆ ಮಾಡಲು ಹೊರಟಿರುವುದು ವಿವಾದಕ್ಕೀಡು ಮಾಡಿದೆ.


ಖಾಸಗಿ ಶಾಲೆಯೊಂದರಲ್ಲಿ ಆಗಸ್ಟ್ 11 ರಂದು ಚೀನಾದ ಹೊಸ ವರ್ಷಾಚರಣೆ ಆಚರಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಚೀನಾದ ಪೋಷಾಕು ಧರಿಸಲು ಸೂಚಿಸಲಾಗಿದೆ. ಕನಿಷ್ಠ ಕೆಂಪು ಬಣ್ಣದ ಉಡುಪು ಧರಿಸಿರಬೇಕು ಮತ್ತು ಚಿನ್ನ, ಬೆಳ್ಳಿ ಆಭರಣಗಳನ್ನು ತೊಟ್ಟು ಬರಬೇಕು ಎಂದು ಶಾಲಾ ಆಡಳಿತ ಮಂಡಳಿ ಸೂಚಿಸಿದೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.

ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಗಡಿ ವಿವಾದದಿಂದಾಗಿ ಭಾರತದಲ್ಲಿ ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಅಭಿಯಾನಗಳು ನಡೆಯುತ್ತಿರುವಾಗ, ಭಾರತದೊಂದಿಗೆ ಯುದ್ಧ ಸಾರುತ್ತೇವೆ ಎಂದು ನೆರೆಯ ರಾಷ್ಟ್ರ ಗುಟುರು ಹಾಕುತ್ತಿರುವಾಗಿ ಇಂತಹದ್ದೊಂದು ದಿನ ಆಚರಿಸುವ ಔಚಿತ್ಯವೇನು ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ… ಇಂದು ಮತ್ತೆ ಡಿಕೆಶಿವಕುಮಾರ್ ಗೆ ಐಟಿ ಡ್ರಿಲ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ