UKG ಮಗುವನ್ನ ಫೇಲ್‌ ಮಾಡಿದ ಖಾಸಗಿ ಶಾಲೆ!

ಶುಕ್ರವಾರ, 10 ಫೆಬ್ರವರಿ 2023 (16:39 IST)
ಸರ್ಕಾರ 9ನೇ ತರಗತಿಯವರೆಗೂ ವಿದ್ಯಾರ್ಥಿಗಳನ್ನ ಯಾವುದೇ ಕಾರಣ ಕೊಟ್ಟು ಫೇಲ್ ಮಾಡಬಾರದೆಂದು ನಿಯಮ ಮಾಡಿದ್ದರೂ UKG ಮಗುವನ್ನ ಖಾಸಗಿ ಶಾಲೆಯೊಂದು ಫೇಲ್‌ ಮಾಡಿತ್ತು. UKG ಮಗುವನ್ನ ಫೇಲ್ ಮಾಡಿ ಸೆಂಟ್​​​ ಜೋಸೆಫ್ ಚಾಮಿನೇಡ್ ಅಕಾಡೆಮಿ ಶಾಲೆ ಹೊಸ ವಿವಾದಕ್ಕೆ ಗುರಿಯಾಗಿತ್ತು. ಬೆಂಗಳೂರಿನ ಆನೇಕಲ್​​ನಲ್ಲಿರುವ ಸೆಂಟ್​​​ ಜೋಸೆಫ್ ಚಾಮಿನೇಡ್ ಅಕಾಡೆಮಿ ಶಾಲೆ UKG ಓದುತ್ತಿದ್ದ 6 ವರ್ಷದ ನಂದಿನಿಯನ್ನ ಫೇಲ್​​ ಮಾಡಿತ್ತು. ಇದರಿಂದ ಗಾಬರಿಗೊಂಡ, ಮಗುವಿನ ಪೋಷಕರು ಸ್ಕೂಲ್ ಮ್ಯಾನೇಜ್ಮೆಂಟ್​ನ್ನು ಸಂಪರ್ಕಿಸಿದ್ರೂ ಈ ವಿಚಾರದಲ್ಲಿ ಯಾವುದೇ ಕ್ರಮ ಜರುಗಿಸದ ಶಾಲೆ ಮೌನಕ್ಕೆ ಶರಣಾಗಿತ್ತು. ಇದನ್ನರಿತ BEO ಜಯಲಕ್ಷ್ಮೀ ಖಾಸಗಿ ಶಾಲೆಗೆ ನೋಟಿಸ್ ನೀಡಿ ವಿದ್ಯಾರ್ಥಿನಿ ಫೇಲ್ ಬಗ್ಗೆ ಮಾಹಿತಿ ಕೇಳಿ, ವಿವರಣೆ ನೀಡದಿದ್ದರೆ ಶಾಲಾ ಅನುಮತಿ ರದ್ದು ಮಾಡುತ್ತೇನೆಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸರುವ ಶಾಲೆ ಯಾವುದೇ ವಿದ್ಯಾರ್ಥಿಯನ್ನು ಫೇಲ್ ಮಾಡಿಲ್ಲ, ಪ್ರಶ್ನೆಗಳಿಗೆ ಉತ್ತರಿಸದ ಕಾರಣ ಕಡಿಮೆ ಅಂಕ ಕೊಡಲಾಗಿದೆ ಎಂದು ಸೆಂಟ್ ಜೋಸೆಫ್ ಚಾಮಿನೆಡ್ ಅಕಾಡೆಮಿ ಸ್ಪಷ್ಟನೆ ನೀಡಿದೆ.
=====================

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ