ಶೇ.30ರಷ್ಟು ಶುಲ್ಕ ಕಡಿತ ವಾಪಾಸ್ ಗೆ ಆಗ್ರಹಿಸಿ ಫೆ.23ಕ್ಕೆ ಖಾಸಗಿ ಶಾಲೆಗಳ ಒಕ್ಕೂಟದಿಂದ ಪ್ರತಿಭಟನೆ
ಬುಧವಾರ, 10 ಫೆಬ್ರವರಿ 2021 (11:39 IST)
ಬೆಂಗಳೂರು : ಶುಲ್ಕದ ಬಗ್ಗೆ ಮತ್ತೆ ಖಾಸಗಿ ಶಾಲೆಗಳು ಕಿರಿಕ್ ಶುರು ಮಾಡಿದ್ದು, ಈ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಪ್ರತಿಭಟನೆ ಹಮ್ಮಿಕೊಂಡಿದೆ.
ಶೇ.30ರಷ್ಟು ಶುಲ್ಕ ಕಡಿತ ವಾಪಾಸ್ ಗೆ ಆಗ್ರಹಿಸಿ ಫೆ.23ಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಪ್ರತಿಭಟನೆ ನಡೆಸಲಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಚೇರಿಗೆ ಬೀಗ ಹಾಕಿ ಹೋರಾಟ ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗೇ ಶೇ.30ರಷ್ಟು ಶುಲ್ಕ ಕಡಿತ ಸಾಧ್ಯವೇ ಇಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ತಿಳಿಸಿದೆ.