ವಿಧಾನಸಭೆ ಅಧಿವೇಶನಕ್ಕೆ ಖಾಸಗಿ ಟಿವಿ ಬ್ಯಾನ್

ಬುಧವಾರ, 9 ಅಕ್ಟೋಬರ್ 2019 (17:50 IST)

ವಿಧಾನಸೌಧದಲ್ಲಿ ನಡೆಯಲಿರೋ ಅಧಿವೇಶನಕ್ಕೆ ಟಿವಿ ಚಾನೆಲ್ ಗಳನ್ನು ಬ್ಯಾನ್ ಮಾಡಲಾಗಿದೆ.

ಖಾಸಗಿ ಟಿವಿಗಳನ್ನು ಬ್ಯಾನ್ ಮಾಡಿದ್ದು ಇದೀಗ ಜೆಡಿಎಸ್, ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿಯಲ್ಲಿ ನಡೆಯಬೇಕಿದ್ದ ಅಧಿವೇಶನವನ್ನು ನೆರೆ ಕಾರಣದಿಂದಾಗಿ ಬೆಂಗಳೂರಲ್ಲಿ ನಡೆಸಲಾಗುತ್ತಿದೆ.

ಆದರೆ ಕಲಾಪ ವರದಿ ಮಾಡದಂತೆ ಖಾಸಗಿ ಟಿವಿ ವಾಹಿನಿಗಳನ್ನು ಬ್ಯಾನ್ ಮಾಡಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಮಾಡಿದ್ದಾರೆ.

ಖಾಸಗಿ ಟಿವಿ ಮೇಲೆ ಬಿಜೆಪಿಗರಿಗೆ ಹಾಗೂ ಸ್ಪೀಕರ್‌ಗೆ ಏಕೆ ಇಷ್ಟು ಕೋಪ? ಬ್ಯಾನ್ ಮಾಡುವಂಥ ತಪ್ಪು ಖಾಸಗಿ ಟಿವಿಗಳು ಮಾಡಿದ್ದೇನು? ಅನ್ನೋ ಪ್ರಶ್ನೆ ಕೇಳಿಬರಲಾರಂಭಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ