ಹೊಸ ಜಿಲ್ಲೆ ರಚನೆ ಬಗ್ಗೆ ತುಟಿ ಬಿಚ್ಚದ ಸಿಎಂ ಯಡಿಯೂರಪ್ಪ

ಸೋಮವಾರ, 30 ಸೆಪ್ಟಂಬರ್ 2019 (17:09 IST)
ಹೊಸ ಜಿಲ್ಲೆ ರಚನೆ ಅಲ್ಲದೇ ಹೊಸಪೇಟೆ ಜಿಲ್ಲೆ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಎಂ ಬಿ.ಎಸ್.ಯಡಿಯೂರಪ್ಪ ಹಿಂದೇಟು ಹಾಕಿದ್ದಾರೆ.

ದಾವಣಗೆರೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ ಎಸ್  ಯಡಿಯೂರಪ್ಪ ಹೇಳಿಕೆ ನೀಡಿದ್ದು,  ರಾಜ್ಯ ಅಭಿವೃದ್ದಿ ಕಡೆ ತೆಗೆದುಕೊಂಡು ಹೋಗಲು ಕ್ರಮ ಕೈಗೊಳ್ಳಲಾಗುತ್ತಿದೆ. ದಸರಾ ಮಹೋತ್ಸವ ಉದ್ಘಾಟನೆ ಮಾಡಿ,  ದಾವಣಗೆರೆ ದಸಾರ ಉತ್ಸವಕ್ಕೆ ಬಂದಿದ್ದೇನೆ. ಒಂದೇ ದಿನ ಎರಡು ದಸರಾ ಉದ್ಘಾಟನೆ ಮಾಡಿದ್ದೇನೆ. ಮೂರನೇ ತಾರೀಖು ಕ್ಯಾಬಿನೆಟ್ ಸಭೆ ಇದೆ.  ಇದಾದ ಬಳಿಕ 6 ನೇ ತಾರೀಖು ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವೆ ಎಂದ್ರು.

ಕೇಂದ್ರ ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆ ನಿರೀಕ್ಷೆ ಇದೆ. ನಮ್ಮಲ್ಲೇ ಇರುವ ಅನುದಾನದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುತ್ತೇವೆ. ಹತ್ತು 11 ತಾಲೂಕು ಇವೆ. ಸಣ್ಣ ಜಿಲ್ಲೆ ಆದರೆ ಅನುಕೂಲ, ತಾಲ್ಲೂಕಿನ ಶಾಸಕರ ಸಭೆ ಕರೆದು ಚರ್ಚೆ ಮಾಡ್ತೇನೆ ಎಂದರು.

ಬೆಳಗಾವಿ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ, ಅಧಿವೇಶನ ಮಾಡಲು ಆಗೋಲ್ಲಾ ಎಂದು. ಹಾಗಾಗಿ ಈ ಬಾರಿ ಬೆಂಗಳೂರಿನಲ್ಲಿ ಅಧಿವೇಶನ ಮಾಡುತ್ತಿದ್ದೇವೆ. ಮುಂದಿನದ್ದು  ಬೆಳಗಾವಿಯಲ್ಲಿ ಮಾಡ್ತೀವಿ ಅಂದ್ರು. ಆದರೆ ಹೊಸಪೇಟೆ ಜಿಲ್ಲೆ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ