ಕಟೀಲ್ ಗೆ ಟಾಂಗ್ ಕೊಟ್ಟ ಪ್ರಿಯಾಂಕ ಖರ್ಗೆ

ಶನಿವಾರ, 21 ಜನವರಿ 2023 (21:36 IST)
ಕಾಂಗ್ರೆಸ್ ಒಳ ಜಗಳ ನೀವೇಕೆ ಮಾತನಾಡ್ತೀರಾ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಸಭೆಯಲ್ಲಿ ಚಪ್ಪಲಿ ಎಸೆದಾಡ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ವಿಚಾರವಾಗಿ ಕೆಪಿಸಿಸಿಯಲ್ಲಿ ಮಾತನಾಡಿ ಅವರು ಯತ್ನಾಳರ ಬಗ್ಗೆ ಬಿಜೆಪಿ ನಾಯಕರು ಯಾಕೆ ಮೌನವಹಿಸಿದ್ದಾರೆ. ಸಚಿವರೊಬ್ಬರನ್ನ ಪಿಂಪ್ ಅಂತ ಹೇಳ್ತಾರೆ. ಸಚಿವರು ಶಾಸಕರ ಡ್ರೈವರ್ ಮರ್ಡರ್ ಮಾಡಿದ್ರು ಅಂತಾರೆ,ಈಶ್ವರಪ್ಪ ಪಕ್ಷದ ವಿರುದ್ಧವೇ ಮಾತನಾಡ್ತಿದ್ರು, ಬಿಎಸ್ ವೈ ಮುಕ್ತ ಬಿಜೆಪಿ ಅಂತ ಹೇಳಿದ್ರು, ಎಲ್ಲಿ ಹೋಗಿತ್ತು ಕಟೀಲರ ಶಿಸ್ತುಕ್ರಮ ಎಂದು ನಳೀನ್ ಕುಮಾರ್ ಕಟೀಲ್ ಗೆ ಟಾಂಗ್ ನಿಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ