ಪ್ರಿಯಾಂಕ್ ಖರ್ಗೆ ಓದಿದ್ದು ಎಸ್ಎಸ್ಎಲ್ ಸಿನಾ, ಪಿಯುಸಿನಾ: ಈ ಕನ್ ಫ್ಯೂಷನ್ ಸರಿ ಮಾಡಿ ಸಾರ್ ನೆಟ್ಟಿಗರಿಂದ ಟ್ರೋಲ್

Krishnaveni K

ಬುಧವಾರ, 29 ಅಕ್ಟೋಬರ್ 2025 (11:00 IST)
ಬೆಂಗಳೂರು: ಪ್ರಿಯಾಂಕ್ ಖರ್ಗೆ ಓದಿದ್ದು ಎಸ್ಎಸ್ಎಲ್ ಸಿನಾ? ಪಿಯುಸಿನಾ? ಮೊದಲು ಈ ಕನ್ ಫ್ಯೂಷನ್ ಗೆ ಉತ್ತರ ಕೊಡಿ ಎಂದು ನೆಟ್ಟಿಗರು ಸಚಿವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಆರ್ ಎಸ್ಎಸ್ ವಿರುದ್ಧ ಹೇಳಿಕೆಗಳು, ಆಂಧ್ರ ಐಟಿ ಸಚಿವರ ವಿರುದ್ಧ ಮತ್ತು ಅಸ್ಸಾಂ ವಿರುದ್ಧ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ. ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅವರು ಸಾಕಷ್ಟು ಬಾರಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಇದೀಗ ಮತ್ತೆ ಅವರ ವಿದ್ಯಾಭ್ಯಾಸದ ವಿಚಾರವಾಗಿ ಟ್ರೋಲ್ ಮಾಡಲಾಗುತ್ತಿದೆ.


Photo credit: X

ಪ್ರಿಯಾಂಕ ಖರ್ಗೆ ಚುನಾವಣಾ ಅಫಿಡವಿಟ್ ನಲ್ಲಿ ಒಂದೊಂದು ಸಾರಿ ಒಂದೊಂದು ರೀತಿ ತಮ್ಮ ವಿದ್ಯಾರ್ಹತೆ ನಮೂದಿಸಿದ್ದಾರೆ ಎಂದು ಫೋಟೋವೊಂದು ವೈರಲ್ ಆಗ್ತಿದೆ. ಈ ಫೋಟೋ ನೋಡಿ ನೆಟ್ಟಿಗರು ಸಚಿವರನ್ನು ಟ್ರೋಲ್ ಮಾಡುತ್ತಿದ್ದಾರೆ.

2018 ರಲ್ಲಿ ಸಚಿವರು 12 ನೇ ತರಗತಿವರೆಗೆ ವಿದ್ಯಾಭ್ಯಾಸ ಎಂದು ನಮೂದಿಸಿದ್ದರೆ 2023 ರಲ್ಲಿ 10 ನೇ ತರಗತಿ ಪಾಸ್ ಎಂದು ಹಾಕಲಾಗಿದೆ. ಹಾಗಿದ್ದರೆ ನಿಜವಾಗಿ ನಿಮ್ಮ ವಿದ್ಯಾರ್ಹತೆ ಏನು? ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ