ಮೊದಲು ಕೇಂದ್ರದಲ್ಲಿ ಅಧಿಕಾರ ಬನ್ನಿ, ಆಮೇಲೆ ಆರ್ ಎಸ್ಎಸ್ ಮಾಡುವಿರಂತೆ: ಪ್ರಿಯಾಂಕ್ ಖರ್ಗೆ ಟ್ರೋಲ್

Krishnaveni K

ಮಂಗಳವಾರ, 1 ಜುಲೈ 2025 (10:21 IST)
ಬೆಂಗಳೂರು: ನಾವು ಮತ್ತೆ ಅಧಿಕಾರಕ್ಕೆ ಬಂದರೆ ಆರ್ ಎಸ್ಎಸ್ ನಿಷೇಧ ಮಾಡುವುದಾಗಿ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ಹಿಂದೂ ಸಂಘಟನೆಗಳು, ಬೆಂಬಲಿಗರು ಮೊದಲು ಗೆಲ್ಲಿ ಆಮೇಲೆ ಬ್ಯಾನ್ ಮಾಡಿ ಎಂದು ಸವಾಲು ಹಾಕಿದ್ದಾರೆ.

ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಆರ್ ಎಸ್ಎಸ್ ನ್ನು ಬ್ಯಾನ್ ಮಾಡಲು ಮುಂದಾಗಿದ್ದೆವು. ಆಗ ಅವರು ಕೈ ಕಾಲು ಹಿಡ್ಕೊಂಡ್ರು ಅಂತ ಹಿಂತೆಗೆದುಕೊಂಡೆವು. ಆದರೆ ಆಗ ನಾವು ಹಾಗೆ ಮಾಡಿದ್ದೇ ತಪ್ಪಾಯ್ತು. ಇನ್ನೊಂದು ಸಲ ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆರ್ ಎಸ್ಎಸ್ ನಿಷೇಧ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು.

ಅವರ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲು ನೀವು ಅಧಿಕಾರಕ್ಕೆ ಬನ್ನಿ ನಂತರ ನಿಷೇಧದ ಮಾತು ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟಾಂಗ್ ಕೊಟ್ಟಿದ್ದಾರೆ. ಈ ಹಿಂದೆ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರಿಗೇ ಆರ್ ಎಸ್ಎಸ್ ಬ್ಯಾನ್ ಮಾಡಲು ಸಾಧ್ಯವಾಗಿಲ್ಲ. ಇನ್ನೂ ಈಗ ನಿಮ್ಮ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಹೆಣಗಾಡುತ್ತಿರುವವರಿಗೆ ಸಾಧ್ಯವಾ ಎಂದು ಪ್ರಶ್ನೆ ಮಾಡಿದ್ದಾರೆ.

ಆರ್ ಎಸ್ಎಸ್ ನ್ನು ನಿಷೇಧ ಮಾಡಿ ನೋಡಿ. ಮತ್ತೆ ನೀವೆಂದೂ ಅಧಿಕಾರಕ್ಕೆ ಬರೋದೇ ಇಲ್ಲ. ಆರ್ ಎಸ್ಎಸ್ ನಿಷೇಧ ಮಾಡುವುದು ಅಷ್ಟು ಸುಲಭವಲ್ಲ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ