ದೆಹಲಿ ವಾಯುಮಾಲಿನ್ಯ ಬಗ್ಗೆ ಪ್ರಿಯಾಂಕಾ ಕೆಂಡ: ಗ್ಯಾಸ್ ಚೇಂಬರ್ ಪ್ರವೇಶಿಸಿದಂತಾಯಿತು ಎಂದ ಕೈ ನಾಯಕಿ

Sampriya

ಗುರುವಾರ, 14 ನವೆಂಬರ್ 2024 (14:13 IST)
Photo Courtesy X
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ವಾಯುಮಾಲಿನ್ಯದ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೆಂಡ ಕಾರಿದ್ದಾರೆ. ಕೇರಳ ರಾಜ್ಯದ ವಯನಾಡ್‌ನಿಂದ ಇಲ್ಲಿಗೆ ಬಂದಿಳಿದಾಗ ಗ್ಯಾಸ್ ಚೇಂಬರ್‌ಗೆ ಪ್ರವೇಶಿಸಿದ ಅನುಭವವಾಯಿತು ಎಂದು  ಅವರು ಆಕ್ರೋಶ ಹೊರಹಾಕಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರು ವಯನಾಡ್‌ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಬುಧವಾರ ಮತದಾನ ನಡೆದಿದೆ. ಅಲ್ಲಿ ಮತದಾನ ಮುಗಿಸಿ ದೆಹಲಿಗೆ ಬಂದಿಳಿದ ಅವರಿಂದ ಈ ಪ್ರತಿಕ್ರಿಯೆ ಬಂದಿದೆ.

ವಯನಾಡ್‌ನಿಂದ ದೆಹಲಿಯಲ್ಲಿ ಬಂದಿಳಿದಾಗ ಗ್ಯಾಸ್ ಚೇಂಬರ್‌ಗೆ ಬಂದಿಳಿದಂತಾಯಿತು. ದಟ್ಟವಾಗಿ ಆವರಿಸಿಕೊಂಡಿರುವ ಹೊಗೆ, ಆಗಸದಿಂದ ನೋಡಿದಾಗ ಮತ್ತಷ್ಟು ಆಘಾತವಾಯಿತು ಎಂದು  ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ದೆಹಲಿಯಲ್ಲಿ ವಾಯು ಮಾಲಿನ್ಯ ವರ್ಷ ಕಳೆದಂತೆ ಹೆಚ್ಚಾಗುತ್ತಿದೆ. ಶುದ್ಧ ಗಾಳಿ ಪಡೆಯಲು ನಾವೆಲ್ಲಾ ಪಕ್ಷಾತೀತವಾಗಿ ಒಂದಾಗಬೇಕಿದೆ. ಮಕ್ಕಳಿಗೆ, ಶ್ವಾಸಕೋಶದ ಸಮಸ್ಯೆ ಇರುವವರಿಗೆ ಉಸಿರಾಡುವುದು ಕಷ್ಟವಾಗಿದೆ. ಇದಕ್ಕೆ ನಾವು ಏನಾದರೂ ಮಾಡಲೇಬೇಕಿದೆ ಎಂದು ಬರೆದುಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ