ಜಾರ್ಖಂಡ್ ಕೇಜ್ರಿವಾಲ್ ಜತೆ ಇದೆ: ಸುನೀತಾ ಕೇಜ್ರಿವಾಲ್‌ಗೆ ಧೈರ್ಯ ತುಂಬಿದ ಕಲ್ಪನಾ ಸೊರೆನ್
ಸುನೀತಾ ಅವರನ್ನು ಭೇಟಿಯಾದ ನಂತರ, ಕಲ್ಪನಾ ಅವರು ಕೆಲವು ತಿಂಗಳ ಹಿಂದೆ ಜಾರ್ಖಂಡ್‌ನಲ್ಲಿ ನಡೆದದ್ದು ಈಗ ನವದೆಹಲಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ನನ್ನ ಪತಿ ಹೇಮಂತ್ ಸೋರೆನ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಈಗ ಅರವಿಂದ್ ಸರ್ ಅವರನ್ನು ಬಂಧಿಸಲಾಗಿದೆ. ಹಾಗಾಗಿ ನಮ್ಮ ದುಃಖವನ್ನು ಹಂಚಿಕೊಳ್ಳಲು ನಾನು ಸುನೀತಾ ಮೇಡಂ ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಈಗ ನಾವು ನಮ್ಮ ಹೋರಾಟವನ್ನು ಮುಂದುವರಿಸಬೇಕು. ಜಾರ್ಖಂಡ್ ರಾಜ್ಯ ಅರವಿಂದ್ ಕೇಜ್ರಿವಾಲ್ ಅವರನ್ನು ಯಾವಾಗಲೂ ಬೆಂಬಲಿಸುತ್ತದೆ ಎಂದು ಕಲ್ಪನಾ ಹೇಳಿದರು.