ಬೆಂಗಳೂರು : ನಜೀರ್ ಸಾಬ್ - ಪಾಕಿಸ್ತಾನ್ ಎಂಬ ಪದಗಳ ನಡುವೆ ಇರುವೆ ಸಾಮ್ಯತೆ ಮತ್ತು ವ್ಯತ್ಯಾಸವನ್ನು ಎಕೋಸ್ಟಿಕ್ ಪರೀಕ್ಷೆ ಹಾಗೂ ಸೌಂಡ್ ಎಂಜಿನೀರಿಂಗ್ ಮೂಲಕ ಪ್ರತ್ಯೇಕವಾಗಿ ಗುರುತಿಸಲಾಗಿದೆ. ವಿಡಿಯೋ ಕ್ಲಿಪ್ ನಲ್ಲಿರುವ ಜನಜಂಗುಳಿಯ ಸದ್ದು, ಬೇರೆ ಜಯಘೋಷಣೆಗಳು ಮತ್ತು ಮಾತುಕತೆಗಳನ್ನು ಡಿಲೀಟ್ ಮಾಡಿ ವಿಶ್ಲೇಷಣೆಗೊಳಪಡಿಸಲಾಗಿದೆ. ಜೊತೆಗೆ, ಘಟನೆಯ ವಿಡಿಯೋ ದೃಶ್ಯಾವಳಿಯನ್ನೂ ಸಹ ಫ್ರೇಂ ಟು ಪ್ರೇಂ ತನಿಖೆಗೆ ಒಳಪಡಿಸಲಾಗಿದೆ. 735 ಫ್ರೇಂಗಳ ಈ ವಿಡಿಯೋದಲ್ಲಿ ಯಾವುದೇ ದೃಶ್ಯವನ್ನು ತಿರುಚಿಲ್ಲ. ಸೇರಿಸಿಲ್ಲ ಹಾಗೂ ವಿರೂಪಗೊಳಿಸಿಲ್ಲ ಎಂದು ವರದಿ ಖಚಿತಪಡಿಸಿದೆ.
ದೃಶ್ಯಾವಳಿಯ ಆಡಿಯೋವನ್ನು ಈಕ್ವಿಲೈಸೇಷನ್ ಮೂಲಕ ವಿವಿಧ ಸ್ತರಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಪಾಕಿಸ್ತಾನ್ ಎಂಬ ಪದ ಬಳಕೆಯನ್ನು ಪ್ರತ್ಯೇಕಿಸಲಾಗಿದೆ. ಜೊತೆಗೆ ನಾಯ್ಸ್ ರಿಡಕ್ಷನ್ ಮೂಲಕ ಇತರೆ ಸದ್ದುಗಳನ್ನು ಅಳಿಸಿ ಹಾಕಿ ಸಂಪೂರ್ಣವಾಗಿ ಪಾಕ್ ಪರ ಘೋಷಣೆಯನ್ನು ಖಚಿತಪಡಿಸಿಕೊಳ್ಳಲಾಗಿದೆ.