ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸುಲಭವಾಗಿ ತಲುಪಬೇಕು : ಮೋದಿ

ಶುಕ್ರವಾರ, 2 ಸೆಪ್ಟಂಬರ್ 2022 (13:44 IST)
ಮಂಗಳೂರು : ಕರಾವಳಿಯ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸುಲಭವಾಗಿ ತಲುಪಬೇಕು.
 
ಡಬಲ್ ಎಂಜಿನ್ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗೋಲ್ಡ್ ಫಿಂಚ್ ಹೋಟೆಲ್ ಮೈದಾನದಲ್ಲಿ 3 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಯೋಜನೆಗಳ ಉದ್ಘಾಟನೆ, ಶಿಲನ್ಯಾಸ ನಡೆಸಿ ಮಾತನಾಡಿದ ಅವರು, ದೇಶಕ್ಕೆ ಸೇನೆ ಸುರಕ್ಷೆ ನೀಡಿದರೆ ಆರ್ಥಿಕವಾಗಿ ದೇಶ ಸುರಕ್ಷಿತವಾಗಬೇಕಾದರೆ ಬಂದರುಗಳು ಅಭಿವೃದ್ಧಿಯಾಗಬೇಕು.

ಕಳೆದ 8 ವರ್ಷದಲ್ಲಿ ಮೂಲಸೌಕರ್ಯ ವಿಚಾರದಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ರಸ್ತೆಗಳ ಸಂಪರ್ಕಕ್ಕೆ ಭಾರತಮಾಲಾ ಇದ್ದರೆ ಸಮುದ್ರ, ಬಂದರುಗಳ ಸಂಪರ್ಕಕ್ಕೆ ಸಾಗಾರಮಾಲಾವನ್ನು ತರಲಾಗಿದೆ.

ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ ಬಂದರುಗಳ ಸಾಮರ್ಥ್ಯ 8 ಪಟ್ಟು ಹೆಚ್ಚಾಗಿದೆ. ಸಾಗಾರಮಾಲಾ ಯೋಜನೆಯಲ್ಲಿ ಕರ್ನಾಟಕ ಹೆಚ್ಚು ಲಾಭ ಮಾಡಿಕೊಂಡಿದೆ ಎಂದು ವಿವರಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ