ಆಗಸ್ಟ್ 15ರವರೆಗೂ ನಿಷೇಧಾಜ್ಞೆ ಜಾರಿ

ಭಾನುವಾರ, 6 ಆಗಸ್ಟ್ 2023 (16:05 IST)
ರಾಯಚೂರು ಜಿಲ್ಲೆಯ ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಬಿಡುಗಡೆ ಹಿನ್ನೆಲೆ ಎಡದಂಡೆ ಕಾಲುವೆ ಉದ್ದಕ್ಕೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿಷೇಧಾಜ್ಞೆ ವಿಧಿಸಿ ರಾಯಚೂರ ಜಿಲ್ಲಾಧಿಕಾರಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ. ಇಂದು ಮಧ್ಯರಾತ್ರಿಯಿಂದ ಆಗಸ್ಟ್ 15 ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.. ಪೊಲೀಸ್ ಬಿಗಿ ಭದ್ರತೆ ನಡುವೆ ಕುಡಿಯುವ ನೀರಿನ ಕೆರೆಗಳನ್ನ ತುಂಬಿಸಲು ಡಿಸಿ ಸೂಚನೆ ನೀಡಿದ್ದಾರೆ. ರಾಯಚೂರ ಜಿಲ್ಲೆಯ ವ್ಯಾಪ್ತಿಯ ಕುಡಿಯುವ ನೀರಿನ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಕಾಲುವೆ ನೀರಿಗೆ ಕನ್ನ ಹಾಕದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಕಾಲುವೆಗೆ ಸದ್ಯ ಹರಿ ಬಿಡಲಾದ ನೀರು ಕೃಷಿ ಚಟುವಟಿಕೆಗೆ ಬಳಸದಂತೆ ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ