12 ಕಡೆ ರೈಡ್ ವೇಳೆ ಸಿಕ್ಕಿದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ..!

ಬುಧವಾರ, 28 ಜೂನ್ 2023 (20:46 IST)
ಕೆಎಎಸ್ ಅಧಿಕಾರಿ ಅಜಿತ್ ಕುಮಾರ್ ರೈ ಮನೆ ಮತ್ತು ಅವರ  ಸಂಬಂಧಿಸಿದ ಸ್ಥಳಗಳ ಮೇಲೆ‌ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸರು ಅಜಿತ್ ಕುಮಾರ್ ರೈ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.. ಲೋಕಾಯುಕ್ತ ಎಸ್ ಪಿ ಕೆ.ವಿ. ಅಶೋಕ್ ನೇತೃತ್ವದಲ್ಲಿ ಅಜಿತ್ ಅವರ ಮನೆ ಹಾಗೂ ಇತರೆ ಹತ್ತು ಸ್ಥಳಗಳ ಮೇಲೆ ಬೆಳ್ಳಂ ಬೆಳಗ್ಗೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ...ಅಜಿತ್ ಅಣ್ಣನ ಮನೆಯಲ್ಲಿ 40ಲಕ್ಷ ಹಣ  ಪತ್ತೆಯಾಗಿದೆ. ಕೆ.ಆರ್.ಪುರ ತಹಶೀಲ್ದಾರ್ ಆಗಿದ್ದ ಕೆಎಎಸ್ ಅಧಿಕಾರಿ ಅಜಿತ್ ಕುಮಾರ್ ರೈ ಬಿಲ್ಡರ್ ಗಳಿಗೆ ತೆರವು ವಿಚಾರದಲ್ಲಿ ಸಹಕಾರ ನೀಡಿದ್ದಾರೆ... ಮತ್ತು ಕೆಲ ಪ್ರದೇಶದಲ್ಲಿ ಹೊತ್ತುವರಿ ಮಾಡಿಲ್ಲ ಎಂಬ ಆರೋಪದ ಮೇಲೆ ಸರ್ಕಾರ ಅವರನ್ನು ಅಮಾನತು ಮಾಡಿತ್ತು...ಇದಾದ ಬಳಿಕ ಮತ್ತೆ ಕೆ ಆರ್ ಪುರಂ ತಹಶಿಲ್ದಾರ್ ಅಗಿ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದರು...ಸದ್ಯ ಕೆಲ ದಿನಗಳ ಹಿಂದೆ ವರ್ಗಾವಣೆಗೊಂಡಿದ್ದರು ಸರ್ಕಾರ ಈ ವರೆಗೆ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ ಈ ವೇಳೆ ಸಾಕಷ್ಟು ಐಷಾರಾಮಿ ಜೀವನ ಸಾಗಿಸುತಿದ್ದರು...ಇನ್ನೂ ಲೋಕಯುಕ್ತ ರೈಡ್ ವೇಳೆ ಇವರ ಬಳಿ ಸಿಕ್ಕಿರುವ ಐಷಾರಾಮಿ ಕಾರ್ ಹಾಗೂ ಬೆಲೆ ಬಾಳುವ ವಾಚ್ ಮತ್ತೆ ಲಿಕ್ಕರ್ ಬಾಟಲ್ ಗಳು ಇವರ ಲೈಪ್ ಸ್ಟೈಲ್ ತಿಳಿಸುತಿತ್ತು...ಇನ್ನು ಇದಕ್ಕೆ ಸಂಭಂದಿಸಿದಂತೆ ಇವರ ಆದಾಯದ ಮೂಲ ಮತ್ತು ಜೀವನ ಶೈಲಿ ನೋಡಿ ಲೋಕಯುಕ್ತ ಆಧಿಕಾರಿಗಳೇ ಒಮ್ಮೆ ಶಾಕ್ ಆಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ