ಅಜಿತ್ ರೈ ಮನೆ ಸೇರಿದಂತೆ ಒಟ್ಟು 12 ಕಡೆ ಏಕ ಕಾಲಕ್ಕೆ ದಾಳಿ ನಡೆಸಿದ್ದೇವೆ-ಲೋಕಾಯುಕ್ತ ಎಸ್.ಪಿ ಅಶೋಕ್
ಅಜಿತ್ ರೈ ಮೇಲೆ ಲೋಕಾ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಎಸ್.ಪಿ ಅಶೋಕ್ ಪ್ರತಿಕ್ರಿಯಿಸಿದ್ದು,ಮಾಹಿತಿದಾರ ಮಾಹಿತಿ ಮೇಲೆ ಎಫ್.ಐ ಆರ್ ದಾಖಲು ಮಾಡಿದ್ದೇವೆ.ಒಟ್ಟು 12 ಕಡೆ ಏಕ ಕಾಲಕ್ಕೆ ದಾಳಿ ನಡೆಸಿದ್ದೇವೆ.ಇಲೀಗಲ್ ಪ್ರಾಪರ್ಟಿ ಇದ್ರೆ ಸೀಜ್ ಮಾಡ್ತೀವಿ.ಅವರ ವರಮಾನಕ್ಕಿಂತ ಆಸ್ತಿ ಹೆಚ್ಚಳ ಹಿನ್ನಲೆ ದಾಳಿ ಮಾಡಿದ್ದೇ.ಅಜೀತ್ ರೈ ನಿವಾಸದಲ್ಲಿ 700 ಗ್ರಾಂ ಅಧಿಕ ಚಿನ್ನಭಾರಣ ಪತ್ತೆ ಜೊತೆಗೆ 2 ಲಕ್ಷ ನಗದು ಹಣ ಪತ್ತೆಯಾಗಿದೆ.ಚಂದ್ರ ಲೇ ಔಟ್ ಸಹೋದರ ನಿವಾಸದಲ್ಲಿ 40 ಲಕ್ಷ ನಗದು ಪತ್ತೆಯಾಗಿದೆ.ದೊಡ್ಡಬಳ್ಳಾಪುರ ಹೊರತು ಪಡಿಸಿ ಸ್ನೇಹಿತರು, ಸಂಭಂಧಿಕರ ಹೆಸರಲ್ಲಿ ಪ್ರಾಪರ್ಟಿ ಅಜೀತ್ ಹೊಂದಿದ್ದಾರೆ.