ವಿಧಾನ ಸೌಧದ ಮುಂದೆ ರೆಬಲ್ ಸ್ಟಾರ್ ಅಂಬರೀಷ್ ವಿರುದ್ಧ ಪ್ರತಿಭಟನೆ
ಸೋಮವಾರ, 5 ಜೂನ್ 2017 (11:37 IST)
ಬೆಂಗಳೂರು: ನಟ, ಶಾಸಕ ಅಂಬರೀಷ್ ವಿರುದ್ಧ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ಜೆಡಿಯು ಅಧ್ಯಕ್ಷ ಬಿ.ಎಸ್. ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಕಳೆದ ಮೂರು ಅಧಿವೇಶನಗಳಿಗೆ ಅಂಬರೀಷ್ ಸತತವಾಗಿ ಗೈರುಹಾಜರಾಗಿದ್ದಾರೆ. ಹೀಗೆ ಸತತವಾಗಿ ಮೂರು ಅಧಿವೇಶನಕ್ಕೆ ಹಾಜರಾಗದಿದ್ದರೆ ಅಂತಹ ಶಾಸಕರ ಸದಸ್ಯತ್ವ ರದ್ದುಗೊಳಿಸಲು ಸಂವಿಧಾನದಲ್ಲಿ ಅವಕಾಶವಿದೆ.
ಹಾಗಾಗಿ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಬಿ.ಎಸ್. ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇದೇ ವೇಳೆ ಪ್ರತಿಭಟನಾ ನಿರತ ಬಿ.ಎಸ್. ಗೌಡರನ್ನು ಪೊಲೀಸರು ಬಂಧಿಸಿದ್ದಾರೆ.