ಕಾಂಗ್ರೆಸ್ ಭವನದಲ್ಲಿ ಬಿಜೆಪಿ ಸಚಿವರ ವಿರುದ್ದ ಪ್ರತಿಭಟನೆ

ಗುರುವಾರ, 19 ಜನವರಿ 2023 (17:25 IST)
ಕಾಂಗ್ರೇಸ್ ಭವನದ ಎದುರು  ಕಾಂಗ್ರೇಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ರಾಜ್ಯ ಕಾಂಗ್ರೆಸ್ ನಾಯಕರ ಅವಹೇಳನ ಮಾಡಿದ ಬಿಜೆಪಿ ಸಚಿವರ ವಿರುದ್ಧ ಸಚಿವರ ಪೋಸ್ಟರ್ ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.ಅಲ್ಲದೇ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಅಸಾಮಾಧಾನ ಹೊರಹಾಕಿದ್ದಾರೆ.
 
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮನೋಹರ್  ಬಿಜೆಪಿಯ ಹಲವು ನಾಯಕರು ಪ್ರಿಯಾಂಕ ಗಾಂಧಿ ಹೇಳಿಕೆಯನ್ನು ಹೀಯಾಳಿಸಿದ್ದಾರೆ.ವಿರೋಧ ಪಕ್ಷದ ನಾಯಕರನ್ನ ಬಿ.ಸಿ. ಪಾಟೀಲ್ ಪಿಂಪ್ ಎಂದಿದ್ದಾರೆ.ವರ್ತೂರು ಪ್ರಕಾಶ್ ದರೋಡೆ ಪ್ರಕರಣದ ರುವಾರಿ.ಅಭಿವೃದ್ಧಿ ಮಾಡದೆ, ಪ್ರತಿ ಬಾರಿ ಮೋದಿ ಅಂತಾರೆ.ಮುನಿರತ್ನ ರಾಜಕೀಯಕ್ಕೆ  ಬರಲು ಹರಿಪ್ರಸಾದ್ ಕಾರಣ.ಸ್ಯಾಂಟ್ರೋ ರವಿಯನ್ನ ಬಿಜೆಪಿ ನಾಯಕರು ಸಪೋರ್ಟ್ ಮಾಡ್ತಿದ್ದಾರೆ ಎಂದು ಕಾಂಗ್ರೇಸ್  ಮುಖಂಡ ಮನೋಹರ್ ಅಸಾಮಾಧಾನ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ