ಎಸಿಸಿ ಸಿಮೆಂಟ್ ಕಾರ್ಖಾನೆ ಕಾರ್ಮಿಕರಿಂದ ಪ್ರತಿಭಟನೆ

ಮಂಗಳವಾರ, 8 ಜನವರಿ 2019 (18:24 IST)
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸಿಸಿ ಸಿಮೆಂಟ್ ಕಾರ್ಖಾನೆ ಹಳೆಯ, ಹೊಸ ಘಟಕದ ಕಾರ್ಮಿಕರಿಂದ ಸಂಘಟಿತ ಧರಣಿ ನಡೆದಿದೆ.

ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಾರ್ಖಾನೆ ಕಾರ್ಮಿಕರಿಂದಲೂ‌ ಪ್ರತಿಭಟನೆ ನಡೆದಿದೆ. ಸಿಮೆಂಟ್ ಲೋಡಿಂಗ್ ಬಂದ್ ಮಾಡಿ ಪ್ರತಿಭಟನೆಯನ್ನು ಕಾರ್ಮಿಕರು ನಡೆಸಿದರು.

ಕೆಲಸದಲ್ಲಿ ರೂಟೇಷನ್ ಪದ್ಧತಿ ಕೈ ಬಿಡಬೇಕು. ಗುತ್ತಿಗೆ ಕಾರ್ಮಿಕರಿಗೆ ತಿಂಗಳಲ್ಲಿ ಕನಿಷ್ಟ 20 ರಿಂದ 25 ದಿನ ಹಾಜರಿ ಕೊಡಬೇಕೆಂದು ಆಗ್ರಹ ಮಾಡಿದರು.

ಸದ್ಯ ಗುತ್ತಿಗೆ ಕಾರ್ಮಿಕರಿಗೆ ತಿಂಗಳಲ್ಲಿ ಕೇವಲ 8 ರಿಂದ 9 ಹಾಜರಿ ನೀಡುತ್ತಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು.
ಗುತ್ತಿಗೆ ಕಾರ್ಮಿಕರಿಗೂ ವೈದ್ಯಕೀಯ ಸೌಲಭ್ಯ, ಕ್ಯಾಂಟೀನ್ ಊಟದ ವ್ಯವಸ್ಥೆ ಕಲ್ಪಿಸಬೇಕು. ಕಾನೂನುಬದ್ಧವಾಗಿ ವೇತನ ಜಾರಿಗಿಳಿಸುವ ಜತೆಗೆ ಇಎಸ್ಐ, ಪಿಎಫ್ ಸೌಲಭ್ಯ ನೀಡುವಂತೆ ಒತ್ತಾಯಿಸಿದರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ