ಇಂದು ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

ಮಂಗಳವಾರ, 27 ಜೂನ್ 2023 (13:30 IST)
ಇಂದು ರಾಜ್ಯಾದ್ಯಂತ  ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ ನಗರದ ಪ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಕೈಗೊಂಡಿದ್ದು,ರಾಜ್ಯಾದ್ಯಂತ  ತಾಲೂಕು ಕೇಂದ್ರಗಳಲ್ಲಿಯೂ ಕಾರ್ಯಕರ್ತೆಯರು ಪ್ರತಿಭಟನೆ ಕೈಗೊಂಡಿದ್ದಾರೆ.ಸುಮಾರು 2000 ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗಿ ಸಾಧ್ಯತೆ  ಇದೆ.
 
ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳೇನು ನೋಡೋದಾದ್ರೆ 
 
ಮೊಬೈಲ್ ನಲ್ಲಿ ಇ - ಸಮೀಕ್ಷೆ ನಡೆಸಲು ಒತ್ತಾಯಿಸುವುದನ್ನ ಕೈ ಬಿಡುವಂತೆ ,ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15000 ಹಾಗೂ ಸಹಾಯಕಿಯರಿಗೆ 10,000 ಗೌರವ ಧನ ಹೆಚ್ಚಿಸಬೇಕು.ನಿವೃತ್ತಿಗೊಂಡ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 3 ಲಕ್ಷ ಗೌರವಧನ ಜಾರಿಗೊಳಿಸಬೇಕು.ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರಿಗೆ ನಿವೃತ್ತಿ ಯೋಜನೆ ಜಾರಿಗೊಳಿಸಿ ಮಾಸಿಕ 5,000 ನಿವೃತ್ತಿ ವೇತನ ನೀಡಬೇಕು.ಗ್ರಾಚ್ಯುಯಿಟಿ ಪಡೆಯಲು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಅರ್ಹರು ಎಂಬುದಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಆಡಳಿತಾತ್ಮಕವಾಗಿ ಜಾರಿಗೊಳಿಸಬೇಕು.ಅಂಗನವಾಡಿ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ನೀಡಬೇಕು.ಗಣತಿಗೆಂದು ನೀಡಿರುವ ಹಳೆ ಮೊಬೈಲ್ ಗಳನ್ನು ತಕ್ಷಣ ವಾಪಸ್ ಪಡೆದು ಹೊಸ ಪೋನ್ ನೀಡಬೇಕು.ಬಾಡಿಗೆಯ ಮನೆಗಳಲ್ಲಿರುವ ಅಂಗನವಾಡಿ ಗಳ ಬಾಡಿಗೆ ಪಾವತಿಸಲು ಹಣ ಬಿಡುಗಡೆ ಮಾಡಬೇಕು.ಮೊಟ್ಟೆ ಪೂರೈಕೆಯ ಟೆಂಡರ್ ಅನ್ನು ರದ್ದುಗೊಳಿಸಿ ಬಾಲ ವಿಕಸನಕ್ಕೆ ನೀಡಬೇಕು ಎಂದು ಹಲವು ಬೇಡಿಕೆಗೆ ಒತ್ತಾಯಿಸಿ ಧರಣಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ