ಮನ್ ಕಿ ಬಾತ್‌ನ 23 ನೇ ಧ್ವನಿ ಸುರಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ನಿವಾಸಿಯಾದ 16 ವರ್ಷದ ಬಾಲೆ ಮಲ್ಲಮ್ಮ, ತನ್ನ ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಧರಣಿ ನಡೆಸಿದ್ದಳು. ಮಲ್ಲಮ್ಮನ ಧರಣಿಯ ನಂತರ ತನ್ನ ಮನೆಯಲ್ಲಿ ಶೌಚಾಲಯ ನಿರ್ಮಾಣವಾಗಿತ್ತು. ಮಲ್ಲಮ್ಮನ ಕುರಿತು ಮೋದಿ ಅವರು ಸುಮಾರು ಒಂದುವರೆ ನಿಮಿಶಗಳ ಕಾಲ ಮಾತನಾಡಿ, ಮಲ್ಲಮ್ಮನ ಸಾಧನೇ ದೇಶಕ್ಕೆ ಮಾದರಿ ಎಂದರು.
ಕ್ರೀಡೆಯ ವಿಷಯದಲ್ಲಿ ಭಾರತ ಇನ್ನಷ್ಟು ಮುಂದೆ ಸಾಗಬೇಕಾಗಿದೆ. ಕ್ರೀಡೆಗೆ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ರಾಜ್ಯ ಸರಕಾರ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು. ಹಾಕಿ ದಂತಕಥೆ ಧ್ಯಾನ ಚಂದ್ ಅವರ ಜನ್ಮ ದಿನಾಚರಣೆಯಾದ ಅಗಸ್ಟ್ 29 ರಂದು, ರಾಷ್ಟೀಯ ಕ್ರೀಡಾ ದಿನ ಎಂದು ಕರೆಯಲಾಗುತ್ತಿದೆ ಎಂದರು.
ದೀಪಾ ಕರ್ಮಕರ್, ಲಲಿತಾ ಬಾಬರ್, ಅಭಿನವ್ ಬಿಂದ್ರಾ, ವಿಕಾಸ್ ಕೃಷ್ಟನ್ ಯಾದವ ಅವರು ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತದ ಹೆಣ್ಣು ಮಕ್ಕಳು ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಹೆಣ್ಣು ಮಕ್ಕಳು ಯಾವುದಕ್ಕೂ ಕಮ್ಮಿಯಿಲ್ಲ ಎಂದು ತೋರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.