ಸಾಂಸ್ಕೃತಿಕ ನಗರಿಯಲ್ಲಿ ಮುಂದುವರೆದ ಪ್ರತಿಭಟನೆ
ಬುಧವಾರ, 9 ಜನವರಿ 2019 (14:43 IST)
ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಎರಡನೇ ದಿನವೂ ಕಾರ್ಮಿಕರು ಕೆಂಪು ಬಾವುಟ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಮೈಸೂರಿನಲ್ಲಿ ಎರಡನೇ ದಿನವೂ ಪ್ರತಿಭಟನೆಗಲು ಮುಂದುವರೆದಿವೆ. ನಗರದ ರಾಮಸ್ವಾಮಿ ವೃತ್ತದಲ್ಲಿ ಬೆಳಿಗ್ಗೆ ವಿವಿಧ ಕಾರ್ಮಿಕ ಸಂಘಟನೆಗಳು, ಎ.ಐ.ಟಿ.ಯು.ಸಿ. ಕಾರ್ಯಕರ್ತರು ಮುಖಕ್ಕೆ ಬಣ್ಣ ಹಚ್ಚಿಕೊಂಡು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕ ಬೇಡಿಕೆಗಳನ್ನು ಅಲಕ್ಷಿಸಿದರೆ ಸರ್ಕಾರಗಳನ್ನೇ ಕಾರ್ಮಿಕರು ಬದಲಿಸಬಲ್ಲರು.
ಭವಿಷ್ಯದಲ್ಲಿ ರಾಜಕೀಯ ನಿರ್ಧರಿತ ಹೋರಾಟಗಳಾಗಬಹುದು. ಕಾರ್ಮಿಕರ ಹೋರಾಟದಿಂದ ಸರ್ಕಾರಗಳೇ ಉರುಳಿದ ಬಹಳಷ್ಟು ನಿದರ್ಶನಗಳು ಚರಿತ್ರೆಯ ಪುಟದಲ್ಲಿವೆ ಎಂದು ಎಚ್ಚರಿಸಿದರು.
ನಂತರ ರಾಮಸ್ವಾಮಿ ವೃತ್ತದಿಂದ ಪುರಸಭಾ ಭವನದವರೆಗೆ ಪ್ರತಿಭಟನಾಕಾರರು ಬೈಕ್ ರ್ಯಾಲಿ ನಡೆಸಿದರಲ್ಲದೆ ಪ್ರಮುಖ ವೃತ್ತಗಳಲ್ಲಿ ಸಭೆಗಳನ್ನು ನಡೆಸಿದರು.