ಹಫ್ತಾ ಪಡೆದು ಅಕ್ರಮ ಮರಳು ಸಾಗಾಟಕ್ಕೆ ಪಿಎಸ್ ಐ ಸಾಥ್?
ಮರಳು ಅಕ್ರಮ ಸಾಗಾಟ ಮತ್ತು ಗಣಿಗಾರಿಕೆಗೆ ಹಫ್ತಾ ಪಡೆದು ಪೊಲೀಸ್ ಅಧಿಕಾರಿಯೇ ಅಕ್ರಮ್ಕಕೆ ಸಾಥ್ ನೀಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಮಂಡ್ಯದ ಕಿಕ್ಕೇರಿ ಪೊಲೀಸ್ ಇಲಾಖೆಯ ಪಿಎಸ್ ಐ ತಿಂಗಳಿಗೆ 20 ಸಾವಿರ ಲಂಚ ತೆಗೆದುಕೊಂಡು ಮರಳು ಸಾಗಾಣಿಕೆಗೆ ಅನಧಿಕೃತವಾಗಿ ಅನುಮತಿ ನೀಡುತ್ತಾರೆ ಎಂದು ದೂರಲಾಗಿದೆ.
ಕಿಕ್ಕೇರಿ ಪಿ ಎಸ್ ಐ ಚಂದ್ರಶೇಖರ್ ಗೆಸಿಬ್ಬಂದಿ ರೇವಣ್ಣ ಶ್ರೀಕಾಂತ್ ಸಹಕಾರ ಮಾಡುತ್ತಿದ್ದಾರೆ ಎಂದು ಚೌಡೇನಹಳ್ಳಿ ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಮರಳು ಮತ್ತು ಗಣಿಗಾರಿಕೆಗೆ ದಂಧೆಗೆ ಕಿಕ್ಕೇರಿ ಪೊಲೀಸ್ ರೇ ಸಾಥ್ ನೀಡಿ ಲಂಚ ಪಡೆದು ಏನು ಗೊತ್ತಿಲ್ಲದ ಹಾಗೆ ಕೈ ಕಟ್ಟಿ ಕುಳಿತಿದ್ದಾರೆ ಅಂತ ಜನರು ದೂರಿದ್ದಾರೆ.