ಪಿಯು ವಾರ್ಷಿಕ ಪರೀಕ್ಷೆ: 80 ವಿದ್ಯಾರ್ಥಿಗಳು ಹಾಜರಿ

ಭಾನುವಾರ, 22 ಆಗಸ್ಟ್ 2021 (10:06 IST)
ಹೊನ್ನಾಳಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಫಲಿತಾಂಶ ತಿರಸ್ಕರಿಸಿದ ಮತ್ತು ನೇರವಾಗಿ ಪರೀಕ್ಷೆ ಕಟ್ಟಿದ ಅಭ್ಯರ್ಥಿಗಳಿಗೆ ಕನ್ನಡ, ಉರ್ದು ಭಾಷಾ ಪರೀಕ್ಷೆಗಳು ನಗರದ ಟಿ.ಬಿ. ವೃತ್ತದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ನಡೆಯಿತು.

ಒಟ್ಟು 82 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 80 ವಿದ್ಯಾರ್ಥಿಗಳು ಹಾಜರಾಗಿದ್ದರು. ಇಬ್ಬರು ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಕಾಲೇಜಿನ ಪ್ರಾಂಶುಪಾಲ, ಪರೀಕ್ಷಾ ಮುಖ್ಯ ಅಧೀಕ್ಷಕ ಕೆ.ಬಿ. ವೇದಮೂರ್ತಿ ತಿಳಿಸಿದರು.
ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ಸಹ ಮುಖ್ಯ ಅಧೀಕ್ಷಕ, ದಾವಣಗೆರೆಯ ಸೀತಮ್ಮ ಪಿಯು ಕಾಲೇಜಿನ ಹಿರಿಯ ಉಪನ್ಯಾಸಕ ಮಹಮ್ಮದ್ ಸಯ್ಯದ್ ಬಾಷಾ, ವಿಶೇಷ ಜಾಗೃತ ದಳದ ಸದಸ್ಯ ವೀರಯ್ಯ, ಕಚೇರಿ ಅಧೀಕ್ಷಕ ಎಚ್. ಬಸವರಾಜ್, ಉತ್ತರ ಪತ್ರಿಕೆ ಪಾಲಕ ಸುರೇಶ್ ಲಮಾಣಿ ಪರೀಕ್ಷಾ ಉಸ್ತುವಾರಿ ವಹಿಸಿಕೊಂಡಿದ್ದರು. ಉಪನ್ಯಾಸಕರಾದ ಬಿ.ಜೆ. ಸುಪ್ರಿಯಾ, ಸುಮತಿ, ಕೆ. ನಾಗರಾಜ್, ಅರುಣ್ ಸಿಂಧೆ, ಆನಂದ್, ಕೆ.ಇ. ನೇತ್ರಾವತಿ, ಬೇಲಿಮಲ್ಲೂರು ನಾಗರಾಜ್, ಸಿಂಗಟಗೆರೆ ಬಸವರಾಜ್, ಚನ್ನೇಶ ಬಿ. ಇದರಮನಿ, ಐಟಿಐ ಕಾಲೇಜು ಉಪನ್ಯಾಸಕರು, ಪ್ರೌಢಶಾಲಾ ವಿಭಾಗದ ಶಿಕ್ಷಕರು ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ