ಕನ್ನಡಕ್ಕಿಂತ ಪರಭಾಷೆಗಳಲ್ಲೇ ಇರುವ ಪ್ರಕಾಶ್ ರಾಜ್ ಗೆ ಯಾಕೆ ರಾಜ್ಯೋತ್ಸವ ಪ್ರಶಸ್ತಿ: ನೆಟ್ಟಿಗರ ತರಾಟೆ

Krishnaveni K

ಶುಕ್ರವಾರ, 31 ಅಕ್ಟೋಬರ್ 2025 (10:32 IST)
ಬೆಂಗಳೂರು: ರಾಜ್ಯ ಸರ್ಕಾರ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ಸಿನಿಮಾ ಕ್ಷೇತ್ರದ ಸಾಧನೆಗಾಗಿ ಪ್ರಕಾಶ್ ರೈ ಹೆಸರೂ ಸೇರಿಸಲಾಗಿದೆ. ಆದರೆ ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರಿಂದ ವಿರೋಧ ವ್ಯಕ್ತವಾಗಿದೆ.

ನಟ ಪ್ರಕಾಶ್ ರೈಗೆ ದಕ್ಷಿಣ ಕನ್ನಡ ಜಿಲ್ಲೆಯ ಸಿನಿಮಾ ಕ್ಷೇತ್ರದ ಸಾಧಕ ಎಂದು ಪ್ರಶಸ್ತಿ ನೀಡಲಾಗಿದೆ. ಆದರೆ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿನಿಮಾ ಕ್ಷೇತ್ರದಿಂದ ಅಥವಾ ದಕ್ಷಿಣ ಕನ್ನಡ ಜಿಲ್ಲೆಯಿಂದ ಅನೇಕ ಸಾಧಕರಿದ್ದರು. ಅವರನ್ನು ಬಿಟ್ಟು ಪ್ರಕಾಶ್ ರೈಗೆ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಕಾಶ್ ರೈ ಕನ್ನಡಕ್ಕಿಂತ ತಮಿಳು, ತೆಲುಗು ಭಾಷಾ ಸಿನಿಮಾಗಳಲ್ಲೇ ಹೆಚ್ಚು ಮಿಂಚುತ್ತಾರೆ. ಪರಭಾಷೆಗೆ ಹೋದ ಮೇಲೆ ಪ್ರಕಾಶ್ ರೈ ಎಂಬ ಹೆಸರಿನಿಂದ ಪ್ರಕಾಶ್ ರಾಜ್ ಎಂದೂ ಬದಲಾಯಿಸಿಕೊಂಡಿದ್ದಾರೆ. ಅವರನ್ನು ಬಿಟ್ಟು ಅಪ್ಪಟ ಕನ್ನಡದ ಕಲಾವಿದರು ಯಾರೂ ಸಿಗಲಿಲ್ವಾ ಎಂದು ಆಕ್ಷೇಪಿಸಿದ್ದಾರೆ.

ಇನ್ನು ಬಿಜೆಪಿ ಬೆಂಬಲಿಗರು, ಸದಾ ಮೋದಿಯನ್ನು ನಿಂದಿಸುವ ಕಾರಣಕ್ಕೆ, ಬಿಜೆಪಿ, ಹಿಂದೂಗಳನ್ನು ವಿರೋಧಿಸುವ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಪ್ರಕಾಶ್ ರೈಗೆ ಪ್ರಶಸ್ತಿ ನೀಡಿರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ