50ಕ್ಕೂ ಹೆಚ್ಚು ದನಗಳು ಸಾವು!

ಸೋಮವಾರ, 5 ಸೆಪ್ಟಂಬರ್ 2022 (08:59 IST)
ಚಿಕ್ಕಮಗಳೂರು : ಹದಿನೈದು ದಿನಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ದನಗಳು ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೂಡಿಗೆರೆ-ಕೊಟ್ಟಿಗೆಹಾರ ಮಾರ್ಗದಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಬಳಿ ಇಂದು ಕೂಡ ಅಪಘಾತದಿಂದ ಎರಡು ಜಾನುವಾರುಗಳು ಸಾವನ್ನಪ್ಪಿವೆ. ಮೂಡಿಗೆರೆಯಲ್ಲಿ ಹಾದುಹೋಗುವ ವಿಲ್ಲುಪುರಂ-ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅಪಘಾತದಿಂದ ಒಂದು ಅಥವಾ ಎರಡು ಜಾನುವಾರುಗಳು ಸಾವನ್ನಪ್ಪುತ್ತಿವೆ.

ಹೀಗೆ ಸಾವನ್ನಪ್ಪುತ್ತಿರುವ ಜಾನುವಾರುಗಳ ಸಂಖ್ಯೆ 15 ದಿನದಲ್ಲಿ 50ಕ್ಕೂ ಹೆಚ್ಚಾಗಿದೆ. ಕೈಮರದಿಂದ ಕೊಟ್ಟಿಗೆಹಾರದವರೆಗೆ ಹಾದುಹೋಗುವ ಹತ್ತಾರು ಹಳ್ಳಿಗಳಲ್ಲಿ ರಸ್ತೆ ಮಧ್ಯೆ ನಿಲ್ಲುವ ಅಥವಾ ರಸ್ತೆ ಬದಿ ಮೇಯುತ್ತಿರುವ ದನಗಳು ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿವೆ. 

ರಾತ್ರಿ ವೇಳೆ ಹೆಚ್ಚಾಗಿ ದನಗಳು ರಸ್ತೆ ಮಧ್ಯೆ ಮಲಗುವುದರಿಂದ ರಾತ್ರಿ ವೇಳೆ ವಾಹನ ಸಾವರರು ವೇಗವಾಗಿ ಹೋಗುವುದರಿಂದ ಒಂದೆಡೆ ಅಪಘಾತಕ್ಕೀಡಾಗಿ ಸಾವನ್ನಪುತ್ತಿವೆ. ಮತ್ತೊಂದೆಡೆ ಅಪಘಾತಗಳನ್ನು ತಪ್ಪಿಸಲು ಹೋಗಿ ಕಾರು-ಬೈಕ್ಗಳು ಅಪಘಾತಗಳಾಗಿ ವಾಹನ ಸವಾರರು ಗಾಯಗೊಳ್ಳುತ್ತಿದ್ದಾರೆ.

ಮೂಡಿಗೆರೆ ಹ್ಯಾಂಡ್ ಪೋಸ್ಟ್ನಿಂದ ಕೊಟ್ಟಿಗೆಹಾರದವರೆಗೂ ಸುಮಾರು 300ಕ್ಕೂ ಅಧಿಕ ಬಿಡಾಡಿ ದನಗಳಿವೆ. ಜೊತೆಗೆ ರೈತರು ಸಾಕಿರುವ ದನಗಳಿವೆ. ರೈತರು ಕೂಡ ದನಗಳನ್ನು ಮೇಯಲು ಬಿಟ್ಟಿರುತ್ತಾರೆ. ಹಾಗಾಗಿ, ರಸ್ತೆಯಲ್ಲಿ ನಿತ್ಯ ದನಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಈ ಬಗ್ಗೆ ಜಿಲ್ಲಾಡಳಿತವಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ ಅಥವಾ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಸರ್ಕಾರ ಬಿಡಾಡಿ ದನಗಳನ್ನು ಗೋಶಾಲೆಗೆ ಸೇರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ