ಜಮೀರ್ ಅಹ್ಮದ್ ಗೆ ಅರೆಬಿಕ್ ತಳಿ, ತುರ್ಕಾ ಎಂದ ಪುನೀತ್ ಕೆರೆಹಳ್ಳಿ ವಿರುದ್ಧ ಕೇಸ್

Krishnaveni K

ಬುಧವಾರ, 13 ನವೆಂಬರ್ 2024 (12:31 IST)
ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿಯನ್ನು ಕರಿಯಾ ಎಂದಿದ್ದ ಸಚಿವ ಜಮೀರ್ ಅಹ್ಮದ್ ವಿರುದ್ಧ ಅರೆಬಿಕ್ ತಳಿ, ತುರ್ಕಾ ಎಂದೆಲ್ಲಾ ವಾಗ್ದಾಳಿ ನಡೆಸಿದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಕೇಸ್ ದಾಖಲಾಗಿದೆ.

ಜಮೀರ್ ವಿರುದ್ಧ ಪುನೀತ್ ಕೆರೆಹಳ್ಳಿ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದರು. ಲೇ ಅರೆಬಿಕ್ ತಳಿ ಜಮೀರ್ ಅಹ್ಮದ್ ನಮ್ಮದೇ ನಾಡಿನಲ್ಲಿ ನಿಂತು ನಮ್ಮದೇ ನಾಡಿನ ನಾಯಕನ ವಿರುದ್ಧ ನಮ್ಮದೇ ಜನರ ಎದುರು ಕರಿಯಾ ಕುಮಾರಸ್ವಾಮಿ ಎಂದು ಹೇಳುವಷ್ಟು ದರ್ಪ ಬಂತಾ ನಿನಗೆ ಎಂದು ವಿಡಿಯೋ ಮಾಡಿ ವಾಗ್ದಾಳಿ ನಡೆಸಿದ್ದರು.

ಪತ್ರಕರ್ತರು ಪ್ರಶ್ನೆ ಮಾಡಿದರೆ ಕಪ್ಪಗಿದ್ದರೆ ಕರಿಯಾ ಎಂದೆ ಎಂದು ದುರಹಂಕಾರದ ಉತ್ತರ ನೀಡುತ್ತೀರಾ. ಲೇಯ್ ತುರ್ಕಾ ಜಮೀರ್ ಅಹ್ಮದ್ ಖಾನ್ ನಿಮ್ಮ ಅಲ್ಲಾ ಯಾವ ಬಣ್ಣ ಇದ್ದೀಯಾ ಎಂದು ಹೇಳುತ್ತೀಯಾ? ನಾನು ಒಪ್ಪಿಕೊಳ್ಳುತ್ತೇನೆ ನಾವು ಹಿಂದೂಗಳು ಕಪ್ಪಗಿದ್ದೇವೆ, ನಾವು ಪೂಜೆ ಮಾಡುವ ಕೃಷ್ಣ ಕಪ್ಪು ಬಣ್ಣದಲ್ಲಿದ್ದಾನೆ. ನಿಮ್ಮ ಅಲ್ಲಾ ಯಾವ ಬಣ್ಣ ಕಪ್ಪಗಿದ್ದಾನೋ, ಬೆಳ್ಳಗಿದ್ದಾನೋ ಎಂದೆಲ್ಲಾ ಹೀನಾಮಾನವಾಗಿ ವಾಗ್ದಾಳಿ ನಡೆಸಿದ್ದರು.

ಇದೀಗ ಜಮೀರ್ ಅಹ್ಮದ್ ವಿರುದ್ಧ ಮಾತನಾಡಿದ ಪುನೀತ್ ಕೆರೆಹಳ್ಳಿ ವಿರುದ್ಧ ಕೇಸ್ ದಾಖಲಾಗಿದೆ. ಈ ಹಿಂದೆಯೂ ಹಲವು ಬಾರಿ ಪುನೀತ್ ಕೆರೆಹಳ್ಳಿ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗಿದ್ದರು. ಅವರ ಮೇಲೆ ಹಲವು ಕೇಸ್ ಗಳೂ ದಾಖಲಾಗಿದ್ದವು. ಈಗ ಜಮೀರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಕೇಸ್ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ