ಸಂತೋಷ್ ಕುಮಾರ್ ಇತ್ತೀಚೆಗೆ ಯೋಗ ಶಿಕ್ಷಕಿಯೊಂದಿಗೆ ಸಲುಗೆಯಿಂದಿದ್ದ. ಇದರಿಂದ ಪತ್ನಿ, ಮಕ್ಕಳ ಬಗ್ಗೆ ಹೆಚ್ಚು ಗಮನಕೊಡುತ್ತಿರಲಿಲ್ಲ. ಇದರಿಂದ ಸಿಟ್ಟಿಗೆದ್ದಿದ್ದ ಬಿಂದು ಶಿಕ್ಷಕಿ ಕತೆ ಮುಗಿಸಲು ಸತೀಶ್ ರೆಡ್ಡಿ ಎಂಬಾತನಿಗೆ ನಾಲ್ಕು ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಳು.
ಅದರಂತೆ ಸತೀಶ್ ರೆಡ್ಡಿ ಮೊದಲು ಯೋಗ ಶಿಕ್ಷಕಿಯ ಸ್ನೇಹ ಸಂಪಾದಿಸಿದ್ದ. ಬಳಿಕ ಆಕೆಯೊಂದಕ್ಕೆ ಪಾರ್ಟನರ್ ಶಿಪ್ ನಲ್ಲಿ ಜಮೀನು ಖರೀದಿಸುವ ನಾಟಕವಾಡಿದ್ದ. ಅಕ್ಟೋಬರ್ 23 ರಂದು ಯೋಗ ಶಿಕ್ಷಕಿಯ ಅಪಹರಣಕ್ಕೆ ಆತ ಸ್ಕೆಚ್ ಹಾಕಿದ್ದ. ನಾಗರಿಕ ಗನ್ ಟ್ರೈನಿಂಗ್ ಕೊಡುತ್ತೇವೆ ಎಂದು ಪುಸಲಾಯಿಸಿ ಕಾರಿನಲ್ಲಿ ಯೋಗ ಶಿಕ್ಷಕಿಯನ್ನು ಕರೆದೊಯ್ದು ಶಿಡ್ಲಘಟ್ಟ ತಾಲೂಕಿನ ಗೌಡನ ಹಳ್ಳಿ ಬಳಿಯ ಕಾಲುವೆ ಸಮೀಪ ಕರೆದುಕೊಂಡು ಹೋಗಿ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ, ಚಿನ್ನದ ಉಂಗುರವನ್ನು ದೋಚಿದ್ದಾರೆ. ಬಳಿಕ ಯೋಗ ಶಿಕ್ಷಕಿಯನ್ನು ಅರೆಬೆತ್ತಲೆಗೊಳಿಸಿ ಗುಂಡಿಗೆ ನೂಕಿ ಮಣ್ಣು, ಟೊಂಗೆಗಳಿಂದು ಮುಚ್ಚಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.