ಯುವರತ್ನ ಬರ್ತಡೇಗೆ ಸಹೋದರ ನಟ ರಾಘವೇಂದ್ರ ರಾಜಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.
'ಕನ್ನಡದ ಖ್ಯಾತ ಚಲನಚಿತ್ರ ನಟ, ಸಾಮಾಜಿಕ, ಪರಿಸರ ಕಾಳಜಿಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಿ, ಸದಾ ಹಸನ್ಮುಖಿಯಾಗಿದ್ದ ನಮ್ಮೆಲ್ಲರ ಅಪ್ಪು ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಸ್ಮರಣೆಗಳು' ಎಂದು ರಾಜ್ಯ ಬಿಜೆಪಿ ಘಟಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಭಕೋರಿದೆ.
ಪುನೀತ್‌ಗೆ ಗಣ್ಯರ ಹಾರೈಕೆ ಹೀಗಿದೆ: 'ತಮ್ಮ ಅತ್ಯುತ್ತಮ ಅಭಿನಯ ಹಾಗೂ ಹೃದಯ ಶ್ರೀಮಂತಿಕೆಯಿಂದಲೇ ಕೋಟ್ಯಂತರ ಜನರನ್ನು ಸೆಳೆದಿರುವ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರು ಎಂದಿಗೂ ಅಜರಾಮರ. ಕರುನಾಡಿನ ಪ್ರೀತಿಯ ಅಪ್ಪು ಅವರ ಜನ್ಮದಿನದ ಸ್ಮರಣೆಯಂದು ಕನ್ನಡ ಕಲಾಲೋಕಕ್ಕೆ ಅವರು ಸಲ್ಲಿಸಿದ ಸೇವೆ ಹಾಗೂ ಕೊಡುಗೆಗಳನ್ನು ಸ್ಮರಿಸುತ್ತಾ, ಅವರ ಆಶಯಗಳನ್ನು ಮುಂದುವರೆಸೋಣ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಅತ್ಯುತ್ತಮ ಅಭಿನಯ ಹಾಗೂ ಹೃದಯ ಶ್ರೀಮಂತಿಕೆಯಿಂದಲೇ ಕೋಟ್ಯಂತರ ಜನರನ್ನು ಸೆಳೆದಿರುವ ಕರ್ನಾಟಕ ರತ್ನ ಡಾ. ಶ್ರೀ ಪುನೀತ್ ರಾಜ್ ಕುಮಾರ್ ಅವರು ಎಂದಿಗೂ ಅಜರಾಮರ. ಕರುನಾಡಿನ ಪ್ರೀತಿಯ ಅಪ್ಪು ಅವರ ಜನ್ಮದಿನದ ಸ್ಮರಣೆಯಂದು ಕನ್ನಡ ಕಲಾಲೋಕಕ್ಕೆ ಅವರು ಸಲ್ಲಿಸಿದ ಸೇವೆ ಹಾಗೂ ಕೊಡುಗೆಗಳನ್ನು ಸ್ಮರಿಸುತ್ತಾ, ಅವರ ಆಶಯಗಳನ್ನು ಮುಂದುವರೆಸೋಣ.
'ಸರಳತೆಯ ರಾಯಭಾರಿ, ಕನ್ನಡ ಚಿತ್ರರಂಗದ ಮಹಾನ್ ಚೇತನ, ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು. ಸಿನಿಮಾ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ' ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪೋಸ್ಟ್ ಮಾಡಿದ್ದಾರೆ.