ಪುನೀತ್ ರಾಜ್ ಕುಮಾರ್ ಜಾಕಿ ರಿ ರಿಲೀಸ್ ಗೆ ಅಭಿಮಾನಿಗಳ ಹಬ್ಬ

Krishnaveni K

ಬುಧವಾರ, 28 ಫೆಬ್ರವರಿ 2024 (11:18 IST)
Photo Courtesy: Twitter
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮಜಯಂತಿಯಂದು ಈ ವರ್ಷ ಅವರ ಸೂಪರ್ ಹಿಟ್ ಸಿನಿಮಾ ಜಾಕಿ ರಿ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಮಾರ್ಚ್ 17 ಕ್ಕೆ ಪುನೀತ್ ರಾಜ್ ಕುಮಾರ್ ಜನ್ಮದಿನ. ಅವರಿಲ್ಲದೇ ಹುಟ್ಟುಹಬ್ಬ ಆಚರಿಸಿಕೊಳ್ಳಲು ಅಭಿಮಾನಿಗಳಿಗೂ ಬೇಸರವಿದೆ. ಆದರೆ ಇದೇ ದಿನ ಅವರನ್ನು ಮತ್ತೊಮ್ಮೆ ಬಿಗ್ ಸ್ಕ್ರೀನ್ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಒದಗಿ ಬರಲಿದೆ.

ದುನಿಯಾ ಸೂರಿ ನಿರ್ದೇಶಿಸಿದ್ದ ಜಾಕಿ ಸಿನಿಮಾ ಪುನೀತ್ ಗೆ ಬ್ರೇಕ್ ಕೊಟ್ಟ ಸಿನಿಮಾ. ಈ ಸಿನಿಮಾದಲ್ಲಿ ಪುನೀತ್ ಗೆ ನಾಯಕಿಯಾಗಿ ಮಲಯಾಳಂ ಮೂಲದ ನಟಿ ಭಾವನಾ ಮೆನನ್ ಅಭಿನಯಿಸಿದ್ದರು. ಈ ಸಿನಿಮಾದ ಹಾಡುಗಳು, ಡ್ಯಾನ್ಸ್, ಆಕ್ಷನ್ ಎಲ್ಲವೂ ಸೂಪರ್ ಹಿಟ್ ಆಗಿತ್ತು.

ಪುನೀತ್ ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೇ ಹೋದರೂ ಅವರನ್ನು ತೆರೆ ಮೇಲೆ ನೋಡಬೇಕು ಎಂದು ಬಯಸುವ ಅಭಿಮಾನಿಗಳಿಗೆ ಈ ಸಿನಿಮಾ ಖುಷಿ ಕೊಡಲಿದೆ. ಮಾರ್ಚ್ 15 ಕ್ಕೆ ಪುನೀತ್ ಹುಟ್ಟುಹಬ್ಬಕ್ಕೆ ಎರಡು ದಿನ ಮೊದಲೇ ಜಾಕಿ ಥಿಯೇಟರ್ ನಲ್ಲಿ ರಿ ರಿಲೀಸ್ ಆಗುತ್ತಿದೆ.  ಈ ಬಾರಿಯೂ ಪುನೀತ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಅವರ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ