ಎಸ್.ಎಂ.ಕೃಷ್ಣರೊಂದಿಗೆ ಖಮರುಲ್, ಮಲಕರೆಡ್ಡಿ ಮಾತುಕತೆ

ಮಂಗಳವಾರ, 28 ಜೂನ್ 2016 (14:09 IST)
ಕಾಂಗ್ರೆಸ್ ಶಾಸಕರಾದ ಖಮರುಲ್ ಇಸ್ಲಾಂ ಮತ್ತು ಎ.ಬಿ.ಮಲಕರೆಡ್ಡಿ ಇಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸಂಪುಟ ಪುನಾರಚನೆಯಲ್ಲಿ ಖಮರುಲ್‌ಗೆ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿದ್ದರೆ, ಮಲಕರೆಡ್ಡಿಯವರಿಗೆ ಸಚಿವ ಸ್ಥಾನ ದೊರೆತಿರಲಿಲ್ಲ. ಸಚಿವ ಸ್ಥಾನ ದೊರೆಯಲು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅಡ್ಡಿಯಾಗಿದ್ದಾರೆ ಎಂದು ಉಭಯ ನಾಯಕರು ಆರೋಪಿಸಿದ್ದರು.
 
ಸುದ್ದಿಗಾರರೊಂದಿಗೆ ಮಾತನಾಡಿದ ಖಮರುಲ್, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ತಾಳ್ಮೆ ಕಳೆದುಕೊಳ್ಳದಂತೆ ಸಲಹೆ ನೀಡಿದ್ದಾರೆ. ರಂಜಾನ್ ಹಬ್ಬದ ನಂತರ ದೆಹಲಿಗೆ ತೆರಳುವುದಾಗಿ ಭರವಸೆ ನೀಡಿದ್ದಾರೆ. ವಿ.ಶ್ರೀನಿವಾಸ್ ಪ್ರಸಾದ್ ಬಗ್ಗೆ ಹೇಳಿಕೆ ನೀಡಲು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ.
 
ಮಾಜಿ ಸಚಿವ ಮಲಕರೆಡ್ಡಿ ಮಾತನಾಡಿ, ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ನಡೆದುಕೊಳ್ಳಲು ತಿಳಿಸಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಕುರಿತಂತೆ ಚರ್ಚೆ ನಡೆಸಿಲ್ಲ. ನಾಯಕತ್ವ ಬದಲಾವಣೆ ತೀರ್ಮಾನ ಶಾಸಕರ ಕೈಯಲ್ಲಿದೆ. ಹಿರಿಯ ನಾಯಕರಿಗೆ ಆದ ಅನ್ಯಾಯದ ಬಗ್ಗೆ ಚರ್ಚೆಯಾಗಬೇಕಾಗಿದೆ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ