ಅತ್ತೆ ಕೊಲ್ಲಲು ಸೊಸೆ ಮಾಡಿರೋ ಖತರ್ನಾಕ್ ಪ್ಲಾನ್!
ಊಟದಲ್ಲಿ ನಿದ್ರೆ ಮಾತ್ರೆ, ಜಿರಳೆ ಔಷಧಿ ಹಾಕಿ ಕೊಲ್ಲಲು ಸೊಸೆ ಯೋಜನೆ ಹಾಕಿದ್ದಳು. ಆದರೆ ಸೊಸೆ ಮಾಡಿದ್ದ ಅಡುಗೆ ತಿಂದು ಆಸೀಫ್ ಕುಟುಂಬ ಅಸ್ವಸ್ಥವಾಗಿದೆ.
ಈ ಹಿನ್ನೆಲೆಯಲ್ಲಿ ಪತ್ನಿ ಆಯಿಷಾ ವಿರುದ್ಧ ಪತಿ ಆಸೀಫ್ ಖಾನ್ ದೂರು ಕೊಟ್ಟಿದ್ದಾರೆ. ಆಯೀಷಾ ತನ್ನ ತಾಯಿ ಜೊತೆ ಮಾತಾಡಿರುವ ಆಡಿಯೋದಲ್ಲಿ ಸತ್ಯ ಬಯಲಾಗಿದೆ.
ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ಆಯೀಷಾ, ಹುಸೇನ್ ಸಾಬ್, ಕಮರ್ ರಾಜ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.