ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟ!
ಆ ಪೈಕಿ 7 ಪ್ರಕರಣಗಳು ಮುಂಬೈನಲ್ಲೇ ಪತ್ತೆಯಾಗಿವೆ. ಸೋಂಕಿತರಲ್ಲಿ ಯಾರೂ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸ ಹೊಂದಿಲ್ಲ. ಇವರಲ್ಲಿ ಒಬ್ಬರು ಬೆಂಗಳೂರು ಹಾಗೂ ಇನ್ನೊಬ್ಬರು ದೆಹಲಿಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.
ಇದರಿಂದಾಗಿ ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 28ಕ್ಕೆ ಹಾಗೂ ದೇಶದಲ್ಲಿ 57ಕ್ಕೆ ಏರಿಕೆಯಾಗಿದೆ.
ಸೋಂಕಿತರು 24ರಿಂದ 41 ವರ್ಷದೊಳಗಿನವರಾಗಿದ್ದಾರೆ. ಮೂರು ಮಂದಿಯಲ್ಲಿ ಯಾವುದೇ ರೋಗಲಕ್ಷಣಗಳಿರಲಿಲ್ಲ. ಐವರಲ್ಲಿ ಸೌಮ್ಯ ಲಕ್ಷಣ ಕಂಡುಬಂದಿದೆ. ಅವರಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರು ಸೋಂಕಿತರನ್ನು ಹೋಮ್ ಐಸೊಲೇಷನ್ನಲ್ಲಿ ಇರಿಸಲಾಗಿದೆ.