ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್ ಅಶೋಕ್‌ ವಾಗ್ದಾಳಿ

geetha

ಗುರುವಾರ, 1 ಫೆಬ್ರವರಿ 2024 (17:24 IST)
ಬೆಂಗಳೂರು-ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೇಕೆದಾಟು ಯೋಜನೆಗೆ ಕಲ್ಲು ಹಾಕಿದವರೇ ಕಾಂಗ್ರೆಸ್  ಬ್ರದರ್ಸ್ ತಮಿಳುನಾಡಿನವರಿಂದ ಮೇಕೆದಾಟು ಯೋಜನೆ ಸ್ಥಗಿತ ಆಗಿದೆ.ಇವರ ಇವರ ನಡುವಿನ ಗಲಾಟೆಯಿಂದ ಕೇಂದ್ರ ವನ್ನು ದೋಷಣೆ ಮಾಡೋದು ಸರಿಯಲ್ಲ ಎಂದು ಆರ್ ಅಶೋಕ್ ಎಂದಿದ್ದಾರೆ. 

ಇವರು ತಮಿಳುನಾಡಿನವರ ಜೊತೆ ಮಾತಾಡಿಕೊಂಡು ಬರಲಿ, ಆ ನಂತರ ನಾವು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ.ಬಜೆಟ್ ನಲ್ಲಿ ಮೇಕೆದಾಟು ವಿಗೆ 25 ಸಾವಿರ ಕೋಟಿ ಇಡಲಿ.ಎತ್ತಿನಹೊಳೆ ಯೋಜನೆಗೆ 15 ಸಾವಿರ ಕೋಟಿ ಇಡಲಿ ಇವಾಗ ಏನೋ ಶ್ಚೇತಪತ್ರ ಹೊರಡಿಸ್ತಾರಂತೆ,ಯುಪಿಎ ಸರ್ಕಾರ ಇದ್ದಾಗ ಬಿಡುಗಡೆ ಆದಾಗ ಎಷ್ಟು, ನಮ್ಮ ಕೇಂದ್ರ ಸರ್ಕಾರ ಎಷ್ಟು ಬಿಡುಗಡೆ ಮಾಡ್ತು ಎಂಬುದನ್ನು ಕೊಡಿ.ಕೊಟ್ಟಿರೋದು, ಕೊಡದೆ ಇರೋದೆಲ್ಲಾ ವಿವರವನ್ನು ಜನರ ಮುಂದೆ ಇಡಿ,ಹಾಲು ಕುಡಿಯುವ ಮಕ್ಕಳಿಗೆ ೩ ರೂಪಾಯಿ ಅಂತೆ, ಬಿಯರ್ ಕುಡಿಯೋರಿಗೆ 15 ರೂಪಾಯಿ, ಕ್ವಾಟರ್ ಗೆ 50 ರೂಪಾಯಿ ಅಂತೆ,ಇದೇ ಇವರ ಗ್ಯಾರಂಟಿ.ಅಲ್ಲೆ ಕಿತ್ತು ಅಲ್ಲೇ ದುಡ್ಡು ಹೊಡೆಯುವ ಸ್ಕೀಮೇ ಸಿದ್ದರಾಮಯ್ಯ ಬಜೆಟ್ ನೋಡಿ ಎಂದು ಆರ್ ಅಶೋಕ್  ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ