ಬೆಂಗಳೂರು-ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ ಸುಗ್ರೀವಾಜ್ಞೆಗೆ ಸಹಿ ಹಾಕದೇ ರಾಜ್ಯಪಾಲರಿಂದ ವಾಪಸ್ ವಿಚಾರವಾಗಿ ಶಾಸಕ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.ಸುಗ್ರೀವಾಜ್ಞೆಯಲ್ಲಿ ಏನಿತ್ತೋ ನಮಗೆ ಗೊತ್ತಿಲ್ಲ.ಸುಗ್ರೀವಾಜ್ಞೆ ವಾಪಸ್ ಯಾಕೆ ಕಳಿಸಿದ್ದಾರೆ ಅಂತ ಗೊತ್ತಿಲ್ಲ.ಸುಗ್ರೀವಾಜ್ಞೆ ವಾಪಸ್ ಬಗ್ಗೆ ಮಾಹಿತಿ ಪಡೆದು ಮಾತಾಡ್ತೇನೆ.ಅಧಿವೇಶನದಲ್ಲೂ ಇದರ ಬಗ್ಗೆ ಚರ್ಚೆಗೆ ಬರಲಿದೆ.ಸರ್ಕಾರ ಇದರ ಬಗ್ಗೆ ಸ್ಪಷ್ಟತೆ ಕೊಡಲಿ.ನಮಗೆ ಸರ್ಕಾರ ಅದರ ಸುಗ್ರೀವಾಜ್ಞೆ ತೋರಿಸಿಲ್ಲ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಇನ್ನೂ ನಾಳೆ ಕೇಂದ್ರ ಬಜೆಟ್ ವಿಚಾರವಾಗಿ ಶಾಸಕ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದು,ಗೃಹ ನಿರ್ಮಾಣದಿಂದ ಹಿಡಿದು ರೈಲ್ವೆ ವಿಸ್ತರಣೆ, ಡಬಲ್ ವೈ,ನ್ಯಾಷನಲ್‌ಹೈವೈ, ರೈಲ್ವೆ ಸ್ಟೇಷನ್ ವಿಮಾನ ನಿಲ್ದಾಣ ಸೇರಿದಂತೆ ನೂರಾರು ಯೋಜನೆಗಳು ಕೊಟ್ಟಿದ್ದಾರೆ.ಇನ್ನೂ ಹತ್ತಾರು ನೂರಾರು ಯೋಜನೆಗಳು ಕೊಟ್ಟಿದ್ದಾರೆ.ಸಬ್ ಹರ್ಬನ್ ರೈಲ್ವೆ , ಮೆಟ್ರೋ ಹಲವಾರು ಯೋಜನೆ ಕೊಟ್ಟಿದ್ದಾರೆ.ಈ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಕಾರಣರಾಗಿದ್ದಾರೆ .ಮುಂದೆ ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲಿ ರಾಜ್ಯಕ್ಕೆ ಒತ್ತು ಕೊಡಲಿದೆ ಎಂಬ ವಿಶ್ವಾಸವಿದೆ ಎಂದು ಅಶ್ವಥ್ ನಾರಾಯಣ ಹೇಳಿದ್ದಾರೆ.