ಸಂಬಳ ಕೊಡಕ್ಕೆ ದುಡ್ಡಿಲ್ಲ, ಗುಂಡಿ ಮುಚ್ಚಲು ಹಣವಿಲ್ಲ, ಟ್ಯಾಕ್ಸ್ ದುಡ್ಡು ಏನ್ಮಾಡ್ತೀರಿ ಸ್ವಾಮಿ: ಆರ್ ಅಶೋಕ್

Krishnaveni K

ಬುಧವಾರ, 29 ಅಕ್ಟೋಬರ್ 2025 (11:17 IST)
ಬೆಂಗಳೂರು: ಶಾಲಾ ಶಿಕ್ಷಕರಿಗೆ ಸಂಬಳ ಕೊಡಕ್ಕೆ ದುಡ್ಡಿಲ್ಲ, ರಸ್ತೆ ಗುಂಡಿ ಮುಚ್ಚಲು ದುಡ್ಡಿಲ್ಲ.. ಹಾಗಿದ್ರೆ ತೆರಿಗೆ ದುಡ್ಡು ಏನ್ಮಾಡ್ತೀರಿ ಸ್ವಾಮಿ ಎಂದು ರಾಜ್ಯ ಸರ್ಕಾರವನ್ನು ವಿಪಕ್ಷ ನಾಯಕ ಆರ್ ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಲಿಕೆ ವ್ಯಾಪ್ತಿಯ ಶಾಲಾ ಶಿಕ್ಷಕರ ವೇತನ ನಾಲ್ಕು ತಿಂಗಳಿನಿಂದ ಆಗಿಲ್ಲ ಎಂದು ವರದಿಯಾಗಿದೆ. ಸ್ಮಶಾನ ಸಿಬ್ಬಂದಿಗೂ ಕಳೆದ 8 ತಿಂಗಳಿನಿಂದ ವೇತನ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳೂ ಹಾಗೇ ಇವೆ. ಹಾಗಿದ್ದರೆ ಜನರು ತೆರಿಗೆ ಕಟ್ಟುವ ದುಡ್ಡು ಎಲ್ಲಿಗೆ  ಹೋಗುತ್ತಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಬೆಂಗಳೂರಿನ ಜನ ಪಾಲಿಕೆಗೆ ಕಟ್ಟುತ್ತಿರುವ ಸಾವಿರಾರು ಕೋಟಿ ತೆರಿಗೆ ಹಣ ಎಲ್ಲಿ ಸ್ವಾಮಿ? ಜನರ ತೆರಿಗೆ ಹಣ ಯಾರ ಜೇಬು ಸೇರುತ್ತಿದೆ? ಇದರ ಮೇಲೆ ಈಗ ಎ-ಖಾತಾ ಪರಿವರ್ತನೆ ನೆಪದಲ್ಲಿ ಮತ್ತೊಮ್ಮೆ ಜನ ಸಾಮಾನ್ಯರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಲು ಇಳಿದಿದ್ದೀರಿ.

ಬ್ರ್ಯಾಂಡ್ ಬೆಂಗಳೂರು ಮಾಡ್ತೀನಿ ಅಂತ ಬೆಂಗಳೂರನ್ನ ಬರ್ಬಾದ್ ಮಾಡಿಬಿಟ್ಟರಲ್ಲ ಸ್ವಾಮಿ. ಜನ ನಿಮ್ಮನ್ನ ಖಂಡಿತ ಕ್ಷಮಿಸುವುದಿಲ್ಲ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ