ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಖರ್ಚು ಮಾಡ್ತಿರೋದು ಕನ್ನಡಿಗರ ಹಣ: ಆರ್ ಅಶೋಕ್ ಕಿಡಿ

Krishnaveni K

ಶುಕ್ರವಾರ, 22 ಆಗಸ್ಟ್ 2025 (10:40 IST)
ಬೆಂಗಳೂರು: ಕಾಂಗ್ರೆಸ್ ಸಾಧನಾ ಸಮಾವೇಶಗಳಿಗೆ ಖರ್ಚು ಮಾಡೋದು ಕನ್ನಡಿಗರ ತೆರಿಗೆಯ ಹಣ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ ಕಾರಿದ್ದಾರೆ.

‘ಸಾಧನಾ ಸಮಾವೇಶಗಳು ಕಾಂಗ್ರೆಸ್ ಪಕ್ಷದ ರಾಜಕೀಯ ಸಮಾವೇಶಗಳು. ಇದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬಂದಿದ್ದರು. ಇಂತಹ ರಾಜಕೀಯ ಸಮಾವೇಶಗಳಿಗೆ ಸರ್ಕಾರದ ದುಡ್ಡು ಖರ್ಚು ಮಾಡುವುದು ತಪ್ಪು’ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಇನ್ನು, ಕೇರಳದ ವಯನಾಡು ಕ್ಷೇತ್ರಕ್ಕೆ 10 ಕೋಟಿ ಅನುದಾನ ನೀಡಿರುವುದರ ಬಗ್ಗೆಯೂ ಅಶೋಕ್ ಮತ್ತೊಮ್ಮೆ ಕಿಡಿ ಕಾರಿದ್ದಾರೆ. ‘ಇಲ್ಲಿ ಕರ್ನಾಟಕದ ಜನ, ರೈತರು ಮಳೆಹಾನಿಯಿಂದ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿರುವಾಗ ಪಕ್ಕದ ಕೇರಳ ರಾಜ್ಯದ ವಯನಾಡಿಗೆ ಕರ್ನಾಟಕದ ಬೊಕ್ಕಸದಿಂದ 10 ಕೋಟಿ ರೂಪಾಯಿ ಕೊಡುವುದು ಎಷ್ಟು ಸರಿ? "ನಮ್ಮ ತೆರಿಗೆ, ನಮ್ಮ ಹಕ್ಕು" ಎಂದು ಬೊಬ್ಬಿಡುವ ಕಾಂಗ್ರೆಸ್ ನಾಯಕರು ಕನ್ನಡಿಗರ ತೆರಿಗೆ ಹಣವನ್ನ ಕೇರಳಕ್ಕೆ ಕೊಡುವುದು ಯಾವ ನ್ಯಾಯ? ಸರ್ಕಾರದ ಬೊಕ್ಕಸ ಕನ್ನಡಿಗರ ಬೆವರಿನ ತೆರಿಗೆ ಹಣವೇ ಹೊರತು ಅದು ಕಾಂಗ್ರೆಸ್ ಪಕ್ಷದ ಪಾರ್ಟಿ ಫಂಡ್ ಅಲ್ಲ’ ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ