ಡಿಕೆಶಿ ಸಿಎಂ ಮಾಡಲು ‘ರಾಗಾ’ ಹಿಂದೇಟು
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಎಂ ಆಸೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಣ್ಣೀರೆರಚಿದ್ರಾ ಎಂಬ ಅನುಮಾನ ಮೂಡಿದೆ.. ಡಿಕೆಶಿಯವರನ್ನು ಸಿಎಂ ಮಾಡಲು ರಾಹುಲ್ ಗಾಂಧಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಡಿಕೆಶಿ ಸಿಎಂ ಆದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಹುದೆಂಬ ಆತಂಕ ರಾಹುಲ್ಗೆ ಮೂಡಿದೆ ಎನ್ನಲಾಗಿದೆ. ವಿರೋಧ ಪಕ್ಷಗಳ ಬಾಯಿಗೆ ಆಹಾರವಾಗಬಾರದೆಂದು ಎಚ್ಚರಿಕೆ ವಹಿಸಲಾಗಿದೆ. ನಾವು ಬಿಜೆಪಿ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿದ್ವಿ, ಇದ್ರಿಂದಾಗಿ ನಮ್ಮ ಪಕ್ಷಕ್ಕೆ ಮತಗಳು ಹರಿದು ಬಂದಿದ್ವು.. ಈ ಹಿನ್ನೆಲೆಯಲ್ಲಿ ಡಿಕೆಶಿಗೆ ಸಿಎಂ ಸ್ಥಾನ ನೀಡಿದರೆ, ಬಿಜೆಪಿ ನಮ್ಮ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ದಾಳವಾಗಿ ಬಳಸಿಕೊಳ್ಳಬಹುದು ಎಂಬುದು ರಾಹುಲ್ ಗಾಂಧಿ ಆತಂಕ ಎನ್ನಲಾಗಿದೆ. ಇದ್ರಿಂದಾಗಿ ಡಿಕೆಶಿಗೆ ಪಟ್ಟ ಕೊಟ್ರೆ ಲೋಕಸಭಾ ಚುನಾವಣೆ ವೇಳೆ ಪಕ್ಷಕ್ಕೆ ಡ್ಯಾಮೇಜ್ ಆಗುವ ಭಯ ಕಾಡ್ತಿದೆ. ಮೊದಲ 2 ವರ್ಷ ಸಿದ್ದರಾಮಯ್ಯರವರಿಗೆ ಸಿಎಂ ಸ್ಥಾನ ನೀಡಿದ್ರೆ ಸೇಫ್ ಎಂದು ರಾಹುಲ್ ಗಾಂಧಿ ಯೋಚಿಸಿದಂತಿದೆ. ಈ 2 ವರ್ಷ ಡಿಕೆಶಿ ಮೇಲಿರುವ ಕೇಸ್ಗಳ ಬಗ್ಗೆ ನಿಗಾವಹಿಸಲು ಸಲಹೆ ನೀಡಲಾಗಿದೆ. ಆದ್ದರಿಂದಲೇ ಡಿಕೆಶಿ ಆಯ್ಕೆಗೆ ರಾಹುಲ್ ಗಾಂಧಿ ಅಸಮ್ಮತಿ ಸೂಚಿಸಿದ್ದಾರಂತೆ.. ಡಿಕೆಶಿ ಪರ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೃದು ಧೋರಣೆ ಹೊಂದಿದ್ದಾರೆ ಎನ್ನಲಾಗಿದೆ.